ಸಾದರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ದಾವಣಗೆರೆ, ಮಾ. 31- 2023-24 ನೇ ಸಾಲಿನ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸಿಗಳಾಗಿದ್ದು, ಸರ್ಕಾರಿ ಕೋಟಾದಲ್ಲಿ ಸ್ಥಾನಗಳಿಸಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕ ರಾಜ್ಯ ಮಟ್ಟದ ಸಾಧು ಲಿಂಗಾಯತ ಸಮಾಜದ, ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಐದು ವರ್ಷದ ಅಧ್ಯಯನದ ಅವಧಿಗೆ ಆರ್ಥಿಕ ನೆರವು ನೀಡಲು ಸಾದರ ನೌಕರರ ಬಳಗ ಮುಂದಾಗಿದೆ. ಸಂಬಂಧಪಟ್ಟ ಸಾಧು ಲಿಂಗಾಯತ ಸಮಾಜದ ವಿದ್ಯಾರ್ಥಿಗಳು ಏಪ್ರಿಲ್ 5 ರೊಳಗಾಗಿ ಕೆ. ನಾಗಪ್ಪ, ಅಧ್ಯಕ್ಷರು, ಸಾದರ ನೌಕರರ ಬಳಗ, ಸಾದರ ಪತ್ತಿನ ಸಹಕಾರ ಬ್ಯಾಂಕ್, 2 ನೇ ಮಹಡಿ, ಡೋರ್ ನಂ. 2000/ೈಎ-28, 16 ನೇ ತಿರುವು, ತರಳಬಾಳು ಬಡಾವಣೆ-ವಿದ್ಯಾನಗರ ಮುಖ್ಯ ರಸ್ತೆ, ದಾವಣಗೆರೆ ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.   ವಿವರಕ್ಕೆ ಸಂಪರ್ಕಿಸಿ : 7829043544, 9844501366, 9886339984, 9844369744.

error: Content is protected !!