ಬ್ರಾಹ್ಮಣ ಸಮಾಜದ ಮಹಿಳಾ ವಿಭಾಗದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವು ಇಂದು ಸಂಜೆ 5.30 ಕ್ಕೆ ವರ್ತುಲ ರಸ್ತೆಯಲ್ಲಿರುವ ಶ್ರೀ ಶಂಕರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಹಿಳಾ ವಿಭಾಗದ ಶ್ರೀಮತಿ ಶ್ರೀಮತಿ ಅಡಿಗ ತಿಳಿಸಿದ್ದಾರೆ.
ಶಿಕ್ಷಕಿ ಶ್ರೀಮತಿ ಜ್ಯೋತಿ ಎನ್. ಉಪಾಧ್ಯಾಯ, ಮಹಿಳಾ ಉದ್ಯಮಿ ಶ್ಯಾಮಲಾ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಮಹಿಳಾ ವಿಭಾಗದ ಅಧ್ಯಕ್ಷರಾದ ನಳಿನಿ ಅಚ್ಯುತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.