ದಾವಣಗೆರೆ, ಮಾ.31- ಉಡುಪಿ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಎರಡನೆಯ ದಕ್ಷಿಣ ಭಾರತ ಮಾಸ್ಟರ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ಶಿಪ್-2024 ಪಂದ್ಯಾವಳಿಯಲ್ಲಿ ನಗರದ ಬಿಎಸ್ಎಫ್ ಮಾಜಿ ಯೋಧ ಮಹಮದ್ ರಫಿ 400 ಮೀ. ಹರ್ಡಲ್ಸ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದಾರೆ. ಅಲ್ಲದೇ 10 ಸಾವಿರ ಮೀಟರ್ ಓಟದಲ್ಲಿ 4ನೇ ಸ್ಥಾನ, 800 ಮೀ. ಓಟದಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ಆ ಮೂಲಕ ಜೂನ್ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಡುಯಲ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿರುವ ರಫಿ ಅವರನ್ನು ದಾವಣಗೆರೆ ಪ್ಯಾರಾ ಮಿಲಿಟರಿ ಸಂಘವು ಅಭಿನಂದಿಸಿದೆ.