ನಗರದಲ್ಲಿ ಇಂದು ತಾಲ್ಲೂಕು ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮಗಳು

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ:  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಬೆಳಗ್ಗೆ 10.30 ಕ್ಕೆ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವೈ. ವೃಷಭೇಂದ್ರಪ್ಪ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಡಾ.ಎ.ಜೆ. ನೀತು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಅವರು `ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ಎಂ. ಷಡಕ್ಷರಪ್ಪ, ರೇಖಾ ಓಂಕಾರಪ್ಪ, ಪರಿಮಳ ಜಗದೀಶ್, ಮಮತಾ ರುದ್ರಮುನಿ, ಹಿರಿಯ ನಾಗರಿಕ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ಜಯಣ್ಣ ದತ್ತಿಯನ್ನು ; ದತ್ತಿ ದಾನಿಗಳಾದ ಎ.ಸಿ. ಜಯಣ್ಣ ಸಂದೀಪ, ಹಿರೇಕೋಗಲೂರು ಶ್ರೀಮತಿ ಪಾರ್ವತಮ್ಮ ಹಾದಿಮನೆ ವೀರಭದ್ರಪ್ಪ ದತ್ತಿಯನ್ನು ; ದತ್ತಿ ದಾನಿಗಳಾದ ಡಾ.ಎಚ್.ವಿ ವಾಮದೇವಪ್ಪ, 7ನೇ ಸಾಹಿತ್ಯ ಸಮ್ಮೇಳನ ಹದಡಿ ಸವಿನೆನಪಿನ ದತ್ತಿಯನ್ನು ; ದತ್ತಿ ದಾನಿಗಳಾದ ಬಿ.ವಾಮದೇವಪ್ಪ ಅವರು ನಡೆಸಿ ಕೊಡುವರು.

ಬಿಇಎ ಪ್ರೌಢಶಾಲೆ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಪೂಜಿ ಪ್ರೌಢ ಶಾಲೆ (ಸಿಬಿಎಸ್‌ಇ) ಇವರ ಸಹಯೋಗದಲ್ಲಿ ಶನಿವಾರ ಮಧ್ಯಾಹ್ನ 12ಕ್ಕೆ ನಗರದ ಬಿ.ಇ.ಎ. ಹೈಯರ್ ಪ್ರೈಮರಿ ಸಿಬಿಎಸ್‌ಇ ಶಾಲಾ ಆವರಣದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಒಲಂಪಿಯಾಡ್‌ ಕಾರ್ಯಕ್ರಮದ ನಿರ್ದೇಶಕ ಜೆ. ಪದ್ಮನಾಭ  ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಲೆಯ ಪ್ರಾಚಾರ್ಯ ಎಚ್.ಎಸ್.ಸತೀಶ್  ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದಾಗಿನಕಟ್ಟೆ ಪರಮೇಶ್ವರಪ್ಪ ಅವರು “ನವೋದಯ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆಗಳು” ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ಷಡಕ್ಷರಪ್ಪ ಎಂ. ಬೇತೂರು, ರೇಖಾ ಓಂಕಾರಪ್ಪ, ಪರಿಮಳ ಜಗದೀಶ್, ಮಮತಾ ರುದ್ರಮುನಿ, ಹಿರಿಯ ನಾಗರಿಕ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್, ಕೆ.ಜಿ. ಪುಷ್ಪಾ, ಜೆ.ಎಂ. ಅವಿನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಶ್ರೀಮತಿ ವಿ.ಆರ್‌. ಕಮಲಾಕ್ಷಿ ಮತ್ತು ವಿಠಲಪುರದ ರುದ್ರಪ್ಪ ಅವರ ಗೌರವಾರ್ಥ ದತ್ತಿಯನ್ನು ದತ್ತಿ ದಾನಿಗಳಾದ ಸೀಮಾಕಿರಣ್ ಮತ್ತು ವಿ.ಆರ್. ಕಿರಣ್, ಶ್ರೀಮತಿ ದಾಕ್ಷಾಯಣಮ್ಮ ಮತ್ತು ಡಾ. ಕೆ.ಜಿ. ಬಸವರಾಜಪ್ಪ ಗೌರವಾರ್ಥ ದತ್ತಿಯನ್ನು ದತ್ತಿ ದಾನಿಗಳಾದ ಸಂಗಮೇಶ್ವರ ಗೌಡ, 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಆನಗೋಡು ಸವಿನೆನಪಿನ ದತ್ತಿಯನ್ನು ದತ್ತಿ ದಾನಿಗಳಾದ ಬಿ. ವಾಮದೇವಪ್ಪ ಅವರು ನಡೆಸಿ ಕೊಡುವರು.

error: Content is protected !!