ಪಶು-ಪಕ್ಷಿಗಳ ನೀರಿನ ದಾಹ ನಿವಾರಣೆಗೆ ಕರುಣಾದಿಂದ ಬಾನಿಗಳ ವ್ಯವಸ್ಥೆ

ಪಶು-ಪಕ್ಷಿಗಳ ನೀರಿನ ದಾಹ ನಿವಾರಣೆಗೆ ಕರುಣಾದಿಂದ ಬಾನಿಗಳ ವ್ಯವಸ್ಥೆ

ದಾವಣಗೆರೆ, ಮಾ.29-  ಬೇಸಿಗೆ ದಿನಗಳಲ್ಲಿ ಪಶು ಪಕ್ಷಿಗಳಿಗೆ ಕುಡಿಯಲು ನೀರಿನ ಸಮಸ್ಯೆ ತಲೆದೋರುತ್ತದೆ. ಅದಕ್ಕಾಗಿ  ಮೂಕ ಪ್ರಾಣಿ-ಪಕ್ಷಿಗಳಿಗೆ  ನೀರುಣಿಸುವ ಉದ್ದೇಶದಿಂದ ನಗರದ ಕರುಣಾ ಟ್ರಸ್ಟಿನ ವತಿಯಿಂದ ಇಂದು ಸರಸ್ವತಿ ನಗರ, ಎಂ.ಸಿ.ಸಿ `ಬಿ’ ಬ್ಲಾಕ್, ಎನ್. ಆರ್. ರಸ್ತೆ, ಶಿವಕುಮಾರ ಸ್ವಾಮಿ ಬಡಾವಣೆ, ಕೆ.ಇ.ಬಿ ಸರ್ಕಲ್ ಮುಂತಾದೆಡೆಯಲ್ಲಿ   20  ಕುಡಿಯುವ ನೀರಿನ ತೊಟ್ಟಿಗಳನ್ನು  ಇಡುವ ವ್ಯವಸ್ಥೆ ಮಾಡಲಾಗಿದೆ.

ಪಶು ಪಕ್ಷಿಗಳ ನೀರಿನ ದಾಹ ತೀರಿಸಲು ಇಚ್ಚಿಸುವವರು ನಮ್ಮನ್ನು ಸಂಪರ್ಕಿಸಿ ಬಾನಿಗಳನ್ನು ಪಡೆಯಬಹುದು. 

ಈ ಕಾರ್ಯಕ್ರಮಕ್ಕೆ ಉದಾರ ಹೃದಯದಿಂದ ಉಳ್ಳವರು ಧನಸಹಾಯ ಮಾಡಲು ವಿನಂತಿ. ಅವರ ಹೆಸರುಗಳನ್ನು ಬಾನಿಗಳ ಮೇಲೆ ಬರೆಸಲಾಗುವುದು.  ಸಂಪರ್ಕಿಸಿ: 9538024422.

error: Content is protected !!