ಮಲೇಬೆನ್ನೂರಿನ ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ನಾಳೆ ಭಾನುವಾರ ಬೆಳಿಗ್ಗೆ 7 ಗಂಟೆಗೆ ಜರುಗಲಿದೆ. ಇಂದು ರಾತ್ರಿ 8.30ಕ್ಕೆ ಮಹಾರಥಕ್ಕೆ ಕಳಸಧಾರಣೆ ಮಾಡ ಲಾಗುವುದು. ಭಾನುವಾರ ಬೆಳಿಗ್ಗೆ ರಥೋತ್ಸವದ ನಂತರ ವಿವಿಧ ಹರಕೆ ಸೇವೆಗಳು ನಡೆಯಲಿದ್ದು, ಸಂಜೆ 5 ಗಂಟೆಗೆ ಸ್ವಾಮಿಯ ಮುಳ್ಳು ಗದ್ದಿಗೆ ತುಳಿಯುವುದು, ನಂತರ ಓಕುಳಿ, ಭೂತನ ಸೇವೆಯೊಂದಿಗೆ ರಥೋತ್ಸವಕ್ಕೆ ತೆರೆ ಬೀಳುವುದು.
January 11, 2025