ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯಕ್ಕೆ 20 ರ‍್ಯಾಂಕ್ ಗಳು

ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯಕ್ಕೆ 20 ರ‍್ಯಾಂಕ್ ಗಳು

ದಾವಣಗೆರೆ, ಮಾ. 24 – ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ 2018ನೇ ಬ್ಯಾಚ್‌ನ ಫಲಿತಾಂಶ ಪ್ರಕಟವಾಗಿದ್ದು, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ವಿವರ.

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು: ಡಾ. ಶಿಬಿನಾ ಶಹಜಾನ್ (ಎಂ.ಡಿ.ನ್ಯಾಯಶಾಸ್ತ್ರ ವಿಭಾಗ, 1 ನೇ ರ‍್ಯಾಂಕ್), ಡಾ. ತೃಪ್ತಿ ದಾಸ್ (ಎಂ.ಡಿ. ರೆಡಿಯೋಲಾಜಿ , 4ನೇ ರ‍್ಯಾಂಕ್), ಡಾ. ವಾಮನ್ ನಾಯಕ ಪಿ. (ಎಂ.ಡಿ. ಸಮುದಾಯ ಆರೋಗ್ಯ ವಿಭಾಗ, 4ನೇ ರ‍್ಯಾಂಕ್),  ಡಾ. ವೀಣಾ ವಿ ಟಿ. (ಎಂ.ಡಿ. ಚರ್ಮರೋಗ ವಿಭಾಗ,  6ನೇ ರ‍್ಯಾಂಕ್), ಡಾ. ದಿವ್ಯಾ ಪಿ ಜೆ (ಎಂ.ಡಿ. ಪೆಥಾಲಾಜಿ, 4ನೇ ರ‍್ಯಾಂಕ್), ಡಾ. ವಿಜಯಲಕ್ಷ್ಮಿ ಮಲ್ಯ ಬಿ., (ಎಂ.ಡಿ. ಜನರಲ್ ಮೆಡಿಸಿನ್, 9 ನೇ ರ‍್ಯಾಂಕ್), ಡಾ. ಕಾರ್ಕಲ ಸಂದೀಪ್ (ಎಂ.ಎಸ್. ಕೀಲು ಮೂಳೆ ವಿಭಾಗ , 9 ನೇ ರ‍್ಯಾಂಕ್) ಪಡೆದಿರುತ್ತಾರೆ.

ವೈದ್ಯಕೀಯ ಪದವಿ ವಿದ್ಯಾರ್ಥಿಗಳು: ಐಶ್ವರ್ಯ ಎಸ್.ಹೆಚ್., ಶ್ರಿಷ್ಟಿ ಗೋಯಲ್, ಅಮೋಘ ಗೌಡ, ಪ್ರಿಯಾಂಕ ಎಸ್., ಕುರುವತ್ತಿ ಋತ್ವಿಕ್, ಪ್ರತೀಕ್ ಕೆ.ಪಿ., ಹಿರೇಮಠ ಚಿನ್ಮಯಿ ಸುನೀಲ್, ಮಾಧವಿ ವೈ.ವಿ. ರಾಜಶೇಖರ, ಸೃಜನ್ ಪಾಂಡೆ, ವಿಶ್ವನಾಥ್ ಬಿ.ಜಿ., ವಿಕಾಸ್ ರೆಂಜಾಲ್, ಸಾಹಿಲ್ ವಿ. ಸೋನಿ, ಸಿರಿ ಕಾರ್ತಿಕ್ ಆರ್. ರ‍್ಯಾಂಕ್ ಪಡೆದವರಾಗಿದ್ದಾರೆ.

ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಜೆಜೆಎಂ ಮೆಡಿಕಲ್ ಕಾಲೇಜಿನ ಛೇರ್ಮನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಬಾಪೂಜಿ ಆಸ್ಪತ್ರೆಯ ಛೇರ್ಮನ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶುಕ್ಲಾ ಎಸ್. ಶೆಟ್ಟಿ ಅಭಿನಂದಿಸಿದ್ದಾರೆ.

error: Content is protected !!