ಜಿಲ್ಲಾ ಕ.ಸಾ.ಪ. ಸಮ್ಮೇಳನದ ಯಶಸ್ಸಿಗೆ ಅಭಿನಂದನೆ

ಹರಿಹರ, ಮಾ.24 – ನಗರದಲ್ಲಿ ಕಳೆದ ವಾರ ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ರಾಜಕೀಯ ಧುರೀಣರು ಮತ್ತು ವಿವಿಧ ಕನ್ನಡ ಪರ ಸಂಘಟನೆಯವರು ಸೇರಿದಂತೆ ಹರಿಹರ ಜನತೆಯ ಉತ್ತಮ ಸಹಕಾರದಿಂದ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆದಿದ್ದು, ಇತಿಹಾಸ ಸೃಷ್ಟಿ ಮಾಡಿದಂತೆ ಆಗಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು. 

ನಗರದ ಉಡುಪಿ ಕಾಮತ್ ಹೋಟೆಲ್ ಸಭಾಂಗಣದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ  13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಡೆದಿರುವುದಕ್ಕೆ, ಕಸಾಪ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಿಗೆ ಅಭಿನಂದನೆಗಳು ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿಸುವಲ್ಲಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಯವರು, ಪತ್ರಕರ್ತರು, ಕನ್ನಡ ಪರ ಸಂಘಟನೆಯವರು, ಸಾಂಸ್ಕೃತಿಕ ರಂಗದ ಅಭಿಮಾನಿಗಳು, ಹಿರಿಯ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಮಿಠಾಯಿ ಅರುಣ್ ಕುಮಾರ್ ಅವರು ಸೇರಿದಂತೆ ಅಪಾರ ಸಂಖ್ಯೆಯ ಜನರು ಜಿಲ್ಲಾ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಹರಿಹರ ನಗರದಲ್ಲಿ ಮಠಾಧೀಶರು ಗೋಷ್ಠಿ ಮಾಡಿ, ಜನರಿಗೆ ಬಸವೇಶ್ವರ ಸೇರಿದಂತೆ ಅನೇಕ ದಾರ್ಶನಿಕರ ಬಗ್ಗೆ ಅರಿವು ಮೂಡಿಸುವ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ ಎಂದರು.

ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್ ಮಾತನಾಡಿ, ನಗರದ ಜನತೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ, ಆತ್ಮವಿಶ್ವಾಸ, ಹುಮ್ಮಸ್ಸು, ಉಲ್ಲಾಸ, ಹುರುಪು ಹೆಚ್ಚಾಗಿರುವುದು ಸಮ್ಮೇಳನದ ಯಶಸ್ವಿಗೆ ಕಾರಣವಾಗಿದೆ ಎಂದರು.

ಒಳ್ಳೆಯ ಕೆಲಸವನ್ನು ಮಾಡಿದವರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸತ್ಕರಿಸುವ ಕಾರ್ಯ ಮಾಡಿರುವ ರಕ್ಷಣಾ ವೇದಿಕೆಯ ಪ್ರೀತಂ ಬಾಬು ರಮೇಶ್ ಮಾನೆ ಮತ್ತು ಅವರ ತಂಡದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. 

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ಗಳಾದ ಎಂ.ಚಿದಾನಂದ ಕಂಚಿಕೇರಿ. ಬಿ.ಬಿ.ರೇವಣ್ಣನಾಯ್ಕ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸದಸ್ಯ ಎ.ರಿಯಾಜ್ ಅಹಮದ್, ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಂ ಬಾಬು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿಗಳಾದ ಜಿಗಳಿ ಪ್ರಕಾಶ್, ಸಿ.ಜಿ. ಜಗದೀಶ್ ಕೊಲಂಬಿ, ಕೃಷ್ಣ ಪಿ. ರಾಜೋಳ್ಳಿ, ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಮೇಶ್ ಮಾನೆ, ನಗರ ಘಟಕದ ಅಧ್ಯಕ್ಷ ಪ್ರೀತಂ ಬಾಬು, ಗೌರವ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ, ಪದಾಧಿಕಾ ರಿಗಳಾದ  ಫ್ರಾನ್ಸಿಸ್,  ಕ್ಸೇವಿಯರ್, ಶಂಕರ್ ದುರುಗೋಜಿ, ಇಂತಿಯಾಜ್ ಆಹ್ಮದ್, ಸಿದ್ದಪ್ಪ, ರಾಮು ರವಿರಾಜ್,  ತಿಪ್ಪೇಶ್, ವಸಂತ್, ರುದ್ರೇಶ್, ರಾಜು,  ಶರತ್, ರೂಪಾ, ಜಾನ್ಸನ್, ಫಜಲ್, ಅರುಣ್, ಅಲ್ತಾಫ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!