ದಾವಣಗೆರೆ, ಮಾ.6- ಇದೇ ದಿನಾಂಕ 10ರ ಭಾನುವಾರ ನಡೆಯಲಿರುವ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕು ಕುರುವತ್ತಿಯ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ನಗರದ ಚೌಕಿಪೇಟೆಯ ಶ್ರೀ ಕುರುವತ್ತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ 20ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನಾಡಿದ್ದು ದಿನಾಂಕ 8ರಂದು ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯಕಾರಿ ಮಂಡಳಿ ನಿರ್ದೇಶಕ ಶಿವಾನಂದಪ್ಪ ತಿಳಿಸಿದ್ದಾರೆ.
ನಾಡಿದ್ದು ದಿನಾಂಕ 8ರಂದು ರಾತ್ರಿ 8 ಕ್ಕೆ ಚೌಕಿಪೇಟೆ ಶ್ರೀ ಗುರು ಶಿವ ಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ 20ನೇ ವರ್ಷದ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯವನ್ನು ಕೂಡಲಸಂಗಮದ ಪಂಚಮ ಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಪುಣ್ಯಕೋಟಿಮಠದ ಶ್ರೀ ಜಗದೀಶ್ವರ ಮಹಾಸ್ವಾಮೀಜಿ ವಹಿಸಲಿದ್ದಾರೆ.
ಪಾದಯತ್ರೆ ಸೇವಾ ಸಮಿತಿಯ ಗೌರವ ಅಧ್ಯಕ್ಷ ಎನ್. ಬಕ್ಕೇಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಸದಸ್ಯ ಆರ್.ಎಲ್. ಶಿವಪ್ರಕಾಶ್, ಪಂಚಮಸಾಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಂ.ದೊಡ್ಡಪ್ಪ, ಪಾದಯಾತ್ರೆ ಸಮಿತಿ ಉಪಾ ಧ್ಯಕ್ಷ ವಿ.ಮಹಾಂತೇಶ್, ಅಧ್ಯಕ್ಷ ಕೆ.ಎ. ಸತ್ಯನಾರಾಯಣ ಭಾಗವಹಿಸಲಿದ್ದಾರೆ.
ಪಾದಯಾತ್ರೆಯು ಹೊಂಡದ ರಸ್ತೆ ಮೂಲಕ ಯರಗುಂಟೆ, ಆವರ ಗೊಳ್ಳ, ಕಕ್ಕರಗೊಳ್ಳ, ಕೊಂಡಜ್ಜಿ, ಬುಳ್ಳಾಪುರದ ಮೂಲಕ ಕುರುಬರಹಳ್ಳಿ ಕ್ರಾಸ್, ದುಗ್ಗಾವತ್ತಿ, ವಟ್ಲಳ್ಳಿ, ಕಡತಿ, ನಂದ್ಯಾಲ, ನಿಟ್ಟೂರು ಕ್ರಾಸ್, ಹಲುವಾ ಗಲದಲ್ಲಿ ಮಧ್ಯಾಹ್ನದ ಊಟ ನಂತರ ಸಂಜೆ 4 ಗಂಟೆಗೆ ಗರ್ಭಗುಡಿ, ಸಿದ್ಧಾ ಪುರ ಮಾರ್ಗವಾಗಿ ಲಿಂಗನಾಯ್ಕನಹಳ್ಳಿ ಮೂಲಕ ಶ್ರೀ ಕುರುವತ್ತಿ ಸುಕ್ಷೇತ್ರ ತಲುಪಲಿದೆ ಎಂದವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾದಯಾತ್ರೆ ಸೇವಾ ಸಮಿತಿ ಪದಾಧಿಕಾರಿಗಳಾದ ಕೆ.ಬಿ. ಶಿವಕುಮಾರ್, ಆರ್.ಬಸವ ರಾಜಪ್ಪ, ಹೆಚ್.ಚನ್ನಬಸಪ್ಪ, ಗಿರೀಶ್ ಬಿ.ಆರ್., ಸಚಿನ್ ಇತರರಿದ್ದರು.