ದಾವಣಗೆರೆ, ಮಾ. 6- ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ಕುಟುಂಬದ ಇಂಜಿನಿಯರಿಂಗ್ ವಿದ್ಯಾರ್ಥಿ ಯೋಗೇಶ್ ಚಿಕಿತ್ಸೆಗೆ ದಾನಿಗಳು ನೆರವು ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಹರಿಹರ ತಾಲ್ಲೂಕು ಅಧ್ಯಕ್ಷ ವೈ. ರಮೇಶ್ ಮಾನೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಟಿಜೆ ನಗರದ 26 ನೇ ವಾರ್ಡ್ ನಿವಾಸಿ, ಕೂಲಿ ಕಾರ್ಮಿಕ ಮಂಜುನಾಥ ಪುತ್ರ ಯೋಗೇಶ್ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ.
ಯೋಗೇಶ್ ಶಿವಮೊಗ್ಗದ ಪೆಸೆಟ್ ಕಾಲೇಜಿನಲ್ಲಿ ಎಐ ವಿಭಾಗದಲ್ಲಿ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಸ್ವತಃ ತಾಯಿಯೇ ಮಗನಿಗೆ ತನ್ನ ಒಂದು ಕಿಡ್ನಿ ನೀಡಲು ಮುಂದಾಗಿದ್ದಾರೆ. ಕಿಡ್ನಿಯ ಶಸ್ತ್ರ ಚಿಕಿತ್ಸೆಗೆ ಹತ್ತು ಲಕ್ಷ ರೂ. ವೈದ್ಯಕೀಯ ವೆಚ್ಚ ತಗುಲಿದೆ ಎಂದು ವೈದ್ಯರು ಹೇಳುತ್ತಾರೆ ಎಂದರು.
ದಾನಿಗಳು ಯೋಗೇಶ್ ನೆರವಿಗೆ ಧಾವಿಸಬೇಕು. ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 1590108026747, ಐಎಫ್‌ಎಸ್‌ಸಿ ಕೋಡ್: CNRB0001590 ಗೆ ಹಣವನ್ನು ಜಮೆ ಮಾಡಬಹುದು. ಮಾಹಿತಿಗಾಗಿ 8792559554 ಗೆ ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಯೋಗೇಶ್ ತಾಯಿ ನಾಗಮ್ಮ, ತಂದೆ ಮಂಜುನಾಥ್, ಪ್ರೀತಮ್ ಬಾಬು ಉಪಸ್ಥಿತರಿದ್ದರು.