ವಿವಿಧ ಕೋರ್ಸ್‍ಗಳಿಗೆ ಉದ್ಯೋಗಾಧಾರಿತ ತರಬೇತಿ

ಹರಿಹರ, ಮಾ. 5 –  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ ಎಸ್ಸಿ, ಎಸ್ಟಿ ಯುವಕ, ಯುವತಿಯರಿಗೆ ಶಿಷ್ಯವೇತನದೊಂದಿಗೆ ವಿವಿಧ ಕೋರ್ಸ್‍ಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐಟಿಐ, ಡಿಪ್ಲೋಮಾ, ಬಿ.ಇ. ಮತ್ತು ಯಾವುದೇ ಪದವಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆಟೋಮೇಷನ್ ಕಂಟ್ರೋ ಲ್, ಇಂಟರ್‍ನೆಟ್ ಆಪ್ ಥಿಂಗ್ಸ್, ರಿವರ್ಸ್ ಇಂಜಿನಿ ಯರಿಂಗ್, 3ಡಿ ಪ್ರಿಂಟಿಂಗ್, ವ್ಯಾಲಿಡೇಷನ್ ಲ್ಯಾಬ್, ರಿಯಾಲಿಟಿ ಲ್ಯಾಬ್, ಪ್ರೊಡಕ್ಟ್ ಡಿಸೈನ್ ಅಂಡ್ ಡೆವಲಪ್ ಮೆಂಟ್, ಸಿ.ಎನ್.ಸಿ ಮಿಲ್ಲಿಂಗ್ ಮಷಿನ್ ಆಪ ರೇಟರ್. ಸಿ.ಎನ್.ಸಿ ಪ್ರೋಗ್ರಾಮಿಂಗ್, ಆಪರೇಷನ್, ಟರ್ನರ್, ಮಿಲ್ಲರ್, ಗ್ರೈಂಡರ್, ಡಿಸೈನರ್-ಮೆಕ್ಯಾನಿಕಲ್, ಪ್ರೋಡಕ್ಷನ್ ಇಂಜಿನಿಯರ್,  ಟೂಲ್ ರೂಮ್ ಮಷಿ ನಿಷ್ಟ್  ಕೋರ್ಸ್‍ಗಳಿಗೆ ತರಬೇತಿ  ನೀಡಲಾಗುವುದು.

 ವಿವರಕ್ಕೆ ಸಂಪರ್ಕಿಸಿ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ. ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ, ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಹರಿಹರ, ಮೊ. 90353729971, 9611025932, 8884488202.

error: Content is protected !!