ದ್ವಿತೀಯ ಪಿಯು: ಗಣಿತಕ್ಕೆ 113 ಗೈರು

ದಾವಣಗೆರೆ, ಮಾ.4- ಜಿಲ್ಲೆಯಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಗಣಿತ ವಿಷಯಕ್ಕೆ 113 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ನೋಂದಾಯಿಸಿಕೊಂಡಿದ್ದ 11313 ವಿದ್ಯಾರ್ಥಿಗಳ ಪೈಕಿ 11200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶಿಕ್ಷಣ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 636 ವಿದ್ಯಾರ್ಥಿಗಳ ಪೈಕಿ 569 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 67 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

error: Content is protected !!