ದಾವಣಗೆರೆ, ಫೆ. 8- ನಗರದ ಕನ್ನಡ ಭವನದಲ್ಲಿ ನಾಡಿದ್ದು ದಿನಾಂಕ 10ರ ಶನಿವಾರ ಹಿರಿಯ ಸಾಹಿತಿ ಬಿ.ಟಿ. ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕ ಬಿಡುಗಡೆ ಮತ್ತು ಕೆ.ವಿ. ಅಕ್ಷರ ಹೆಗ್ಗೋಡು ಅವರ ಮಾರ್ಗದರ್ಶನದಲ್ಲಿ ವಿದ್ಯಾ ಅಕ್ಷರ ಮತ್ತು ವಾಣಿ ಸತೀಶ್ ಇವರಿಂದ `ದೂಪ್ದಳ್ಳಿ ಸೆಕ್ಸಿ ದುರುಗ’ ರಂಗ ಪ್ರಸ್ತುತಿ ನಡೆಯಲಿದೆ. ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಾಹಿತಿ ಜಿ.ಪಿ. ಬಸವರಾಜು ಪುಸ್ತಕ ಬಿಡುಗಡೆ ಮಾಡ ಲಿದ್ದಾರೆ. ಲೇಖಕ ಹಾಗೂ ಪ್ರಾಧ್ಯಾಪಕ ತುಮಕೂರಿನ ಡಾ. ರವಿಕುಮಾರ ನೀಹ ಪುಸ್ತಕ ಕುರಿತು ಮಾತ ನಾಡಲಿದ್ದು, ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಉಪ ಸ್ಥಿತಿಯಲ್ಲಿ ಸಾಹಿತಿ ಸೌಮ್ಯ ಕೋಡೂರು, ಕೌದಿ ಪ್ರಕಾ ಶನದ ಡಾ. ಮಮತ ಅತಿಥಿಗಳಾಗಿ ಉಪಸ್ಥಿತರಿರುವರು. ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿ ಸಬಹುದಾಗಿದೆ ಎಂದು ಜಾಹ್ನವಿ ತಿಳಿಸಿದ್ದಾರೆ.
December 23, 2024