ಮೋದಿ ಕಳಂಕದಿಂದ ಹೊರಬರಲು ಅಡ್ವಾಣಿಯವರಿಗೆ ಭಾರತ ರತ್ನ : ಡಿಬಿ

ಮೋದಿ ಕಳಂಕದಿಂದ ಹೊರಬರಲು ಅಡ್ವಾಣಿಯವರಿಗೆ ಭಾರತ ರತ್ನ : ಡಿಬಿ

ದಾವಣಗೆರೆ, ಫೆ.5- ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾದ  ಎಲ್. ಕೆ. ಅಡ್ವಾಣಿಯವರಿಗೆ  ರಾಷ್ಟ್ರಪತಿ, ಪ್ರಧಾನಮಂತ್ರಿ ಹುದ್ದೆ ಸಿಗಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಉನ್ನತ ಹುದ್ದೆಗೆ ಅಡ್ವಾಣಿಯವರು ಬರದಂತೆ ತಡೆದರು ಎಂದು ಕೆಪಿಸಿಸಿ ವಕ್ತಾರ
ಡಿ. ಬಸವರಾಜ್ ಆರೋಪಿಸಿದ್ದಾರೆ. ಅಡ್ವಾಣಿಯವರು ಎ. ಬಿ. ವಾಜಪೇಯಿ ಅವರೊಂದಿಗೆ ಆರ್ ಎಸ್ ಎಸ್, ಜನಸಂಘ, ಬಿಜೆಪಿ ದೇಶದಲ್ಲಿ ನೆಲೆ ಯೂರಲು ಜೀವನವಿಡಿ ಶ್ರಮಿಸಿದ್ದಾರೆ. ಆದರೆ ಕುಟಿಲತೆಯಿಂದ ಅವರಿಗೆ ಉನ್ನತ ಹುದ್ದೆ ತಪ್ಪಿಸಿ, ತಾವೇ ದೇಶದ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ ಎಂದು  ಅವರು ತಿಳಿಸಿದ್ದಾರೆ.

error: Content is protected !!