ಮುಂಬೈ ಮ್ಯಾರಥಾನ್: ಮಹಮ್ಮದ್ ರಫಿ 570ನೇ ಸ್ಥಾನ

ಮುಂಬೈ ಮ್ಯಾರಥಾನ್: ಮಹಮ್ಮದ್ ರಫಿ 570ನೇ ಸ್ಥಾನ

ದಾವಣಗೆರೆ, ಜ.29- ವಿಶ್ವದ ಪ್ರಸಿದ್ದ ಟಾಪ್ ಟೆನ್ ಮ್ಯಾರಥಾನ್ ಗಳಲ್ಲಿ ಒಂದಾದ ಹಾಗೂ ಏಷ್ಯಾ ಖಂಡದ ಟಾಪ್ ಒನ್ ಮ್ಯಾರಥಾನ್ ಎಂದು ಪ್ರಸಿದ್ದಿಯಾದ ಟಾಟಾ ಮುಂಬೈ ಮ್ಯಾರಥಾನ್ 2024 ಇದೇ ದಿನಾಂಕ 21ರ ಭಾನುವಾರ  ಮಹಾರಾಷ್ಟ್ರದ ಮುಂಬೈ ನಲ್ಲಿ  ನಡೆಯಿತು. ಈ ಮ್ಯಾರಥಾನ್ ನಲ್ಲಿ ದೇಶ, ವಿದೇಶಗಳಿಂದ ಸುಮಾರು 59 ಸಾವಿರಕ್ಕೂ ಹೆಚ್ಚು  ಸ್ಪರ್ಧಿಗಳು ಭಾಗವಹಿಸಿದ್ದರು. ಫುಲ್ ಮ್ಯಾರಥಾನ್ (42.195 ಕಿ.ಮೀ) ಸ್ಪರ್ಧೆಗೆ 8,758 ಜನ ಭಾಗವಹಿಸಿದ್ದು, ನಗರದ ಮಾಜಿ ಬಿಎಸ್ಎಫ್ ಯೋಧ ಮ್ಯಾರಥಾನ್ ಕ್ರೀಡಾಪಟು ಮಹಮ್ಮದ್ ರಫಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ 4 ಗಂಟೆ 35 ನಿಮಿಷ 59 ಸೆಕೆಂಡಿನಲ್ಲಿ 42.195 ಕಿ.ಮೀ ಪೂರ್ಣ ಗೊಳಿಸಿ 570ನೇ ಸ್ಥಾನ ಪಡೆದಿದ್ದಾರೆ. ಇವರಿಗೆ ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಕ್ಷೇಮಾಭಿವೃದ್ಧಿ ಸಂಘವು ಅಭಿನಂದಿಸಿದೆ. 

error: Content is protected !!