ರಾಣೆಬೆನ್ನೂರು, ಜ.22- ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇದೇ ದಿನಾಂಕ 28ನೇ ಭಾನುವಾರದಂದು ಮಾಗೋಡು ರಸ್ತೆಯ ಶಕ್ತಿ ಧಾಮದಲ್ಲಿ ಕನ್ನಡ ನುಡಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಗೀತ, ನಾಟಕ, ಜಾನಪದ ಕ್ಷೇತ್ರದಲ್ಲಿನ ಸಾಧಕರಿಗೆ `ಕರ್ನಾಟಕ ಕಲಾ ಸೌರಭ ಪ್ರಶಸ್ತಿ’ ಹಾಗೂ ಸಮಾಜ ಸೇವಕರಾದ ಡಾ.. ಕೆ.ಎನ್. ಕರಿಬಸಪ್ಪ ಅವರಿಗೆ ಸಮಾಜ ಕಲಾ ಸೇವಾ ರತ್ನ’ ಪ್ರಶಸ್ತಿ ನೀಡಲಾಗುತ್ತದೆ.
March 12, 2025