ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಪಂಡಿತಾರಾಧ್ಯ ಶ್ರೀ ಸಂತಸ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಪಂಡಿತಾರಾಧ್ಯ ಶ್ರೀ ಸಂತಸ

ಸಾಣೇಹಳ್ಳಿ, ಜ.18- ಬಸವಣ್ಣ ನವರನ್ನು `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ರುವ ವಿಚಾರ ತಿಳಿದು ತುಂಬಾ ಸಂತೋ ಷವಾಯಿತು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಂಪುಟದ ಎಲ್ಲ ಸಚಿವರನ್ನು  ಅಭಿನಂದಿಸುವುದಾಗಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾದರು ಎಂದಾಕ್ಷಣ ಕೇವಲ ಸಂಸ್ಕೃತಿಗೆ ಮಾತ್ರ ಮೀಸಲು ಅಂತ ಅಲ್ಲ. ಸಂಸ್ಕೃತಿಯಲ್ಲಿ ಧರ್ಮ, ಕಲೆ, ಸಾಹಿತ್ಯ, ಸಂಗೀತ, ನಾಟಕ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಇದೆ. ಜೀವನದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಚೈತನ್ಯವನ್ನು ಸಮಾಜಕ್ಕೆ ತಂದುಕೊಟ್ಟವರು ಬಸವಣ್ಣನವರು. ಅಂತಹ ಬಸವಣ್ಣನವರನ್ನು ಕರ್ನಾಟಕ ಸರಕಾರ `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿರುವುದು ಕರ್ನಾಟಕದ ಜನತೆಗೆ ಮಾತ್ರವಲ್ಲ; ಇಡೀ ಭಾರತೀಯರು ಮೆಚ್ಚಬಹುದಾದ, ಗೌರವಿಸಬಹುದಾದ ಸಂಗತಿ ಎಂದವರು ಹೇಳಿದ್ದಾರೆ. 

 ಸರ್ಕಾರ ಕೇವಲ ಘೋಷಣೆ ಮಾಡಿದರೆ ಸಾಲದು. ಅದು ಕಲೆ, ಸಾಹಿತ್ಯ, ಸಂಗೀತ ಇವುಗಳ ನೆಲೆಯಲ್ಲಿ ಬಸವಣ್ಣನವರ ಆಶಯಗಳನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಇವುಗಳಿಗೆ ಒಂದು ಸಮಿತಿ ಯನ್ನು ನೇಮಕ ಮಾಡಿ ಅದರಲ್ಲಿ ಅರ್ಹವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರನ್ನಾಗಿ ನೇಮಿಸಬೇಕು. ಅವರ ಮೂಲಕ ಬಸವ ಸಂದೇಶವನ್ನು ಇಡೀ ನಾಡಿನಲ್ಲಿ ಬಿತ್ತರಿಸುವಂಥ ಕಾರ್ಯವನ್ನು ಸರಕಾರ ಮಾಡಬೇಕು. ಅದಕ್ಕೆ ಬೇಕಾದ ಆರ್ಥಿಕ ನೆರವನ್ನು ಸರಕಾರ ನೀಡಬೇಕು ಎಂದು ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.

error: Content is protected !!