ದಾವಣಗೆರೆ, ಜ. 2 – ಪ್ರಸಕ್ತ ಸಾಲಿನ ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್‍ಪಾಸ್ ಹೊಸದಾಗಿ, ನವೀಕರಣ ಮೂಲಕ ಪಡೆಯಲು ಆನ್‍ಲೈನ್‍ನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂಧು ಪೋರ್ಟ್‍ಲ್ https://serviceonline.gov.in/karnataka/ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್ (ಐಡಿ)ಗೆ ಮತ್ತು ಹೊಸ ಪಾಸ್‍ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು, ದಾವಣಗೆರೆ ವಿಭಾಗ ಕೌಂಟರ್(ಐಡಿ)ಗೆ ಅರ್ಜಿ ಸಲ್ಲಿಸಬ ಹುದು. ಡಿ.31 ವರೆಗೆ ಮಾನ್ಯತೆ ಇರುವ ವಿಕಲ ಚೇತನರ ಪಾಸ್‍ಗಳನ್ನು ಬರುವ ಫೆಬ್ರವರಿ 28ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಪಾಸ್ ನವೀಕರಣ ಮಾಡಿಸಿಕೊಳ್ಳಲು ಪಾಸ್ ವಿತರಣಾ ಕೇಂದ್ರ ಮತ್ತು ತಾಲ್ಲೂಕು ವಿವರ: 1.1.2024 ರಿಂದ 29.2.2024 ರವರೆಗೆ ದಾವಣಗೆರೆ, ಜಗಳೂರು, ಚನ್ನಗಿರಿ, ಫಲಾನುಭವಿಗಳಿಗೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಹರಿಹರ ಫಲಾನುಭವಿಗಳಿಗೆ ಹರಿಹರದ ಬಸ್ ನಿಲ್ದಾಣವನ್ನು ಸಂಪರ್ಕಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.