ದಾವಣಗೆರೆ, ಡಿ.15- ಶ್ರೀ ಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿ ವತಿಯಿಂದ ನಗರದ ಲೇಬರ್ ಕಾಲೋನಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೊನ್ನೆ ಗಣ ಹೋಮ, ಪೂರ್ಣಾಹುತಿ, ಬಾಳೆ ಮಂಟಪ ಸ್ಥಾಪನೆ ಮತ್ತು ದೀಪೋತ್ಸವದೊಂದಿಗೆ ಸ್ವಾಮಿಯ ಮೆರವಣಿಗೆ ಕಾರ್ಯಕ್ರಮಗಳು ಭಕ್ತಿಯಿಂದ ನೆರವೇರಿದವು. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಲೇಬರ್ ಕಾಲೋನಿಯಲ್ಲಿ ದೀಪೋತ್ಸವ
