ದಾವಣಗೆರೆ, ಡಿ. 10 – ನಗರದ ಕೊಟ್ಟೂರು ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಡಿದ್ದು ದಿನಾಂಕ 12ರ ಮಂಗಳವಾರ ಛಟ್ಟಿ ಅಮಾ ವಾಸ್ಯೆ ಪ್ರಯುಕ್ತ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ ಅಭಿಷೇಕ – ಪೂಜೆ, ನಂತರ ಪ್ರಸಾದ ದಾಸೋಹವನ್ನು ಏರ್ಪಡಿಸಲಾಗಿದೆ. ಶ್ರೀಮತಿ ಲೀಲಾ, ಡಿ. ಕೊಟ್ರಪ್ಪ ಅವರು ಪ್ರಸಾದ ಸೇವಾಕರ್ತರಾಗಿದ್ದಾರೆ. ದಾಸೋಹ ಮನೆ ಕಟ್ಟಡಕ್ಕೆ ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ ಎಂದು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ (96118 89151) ತಿಳಿಸಿದ್ದಾರೆ.
December 28, 2024