ಕಳ್ಳರ ಬಂಧನ : ಸೈಕಲ್‌ಗಳ ವಶ

ದಾವಣಗೆರೆ, ಡಿ.5-  ಸೈಕಲ್‌ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 1.06 ಲಕ್ಷ ರೂ. ಬೆಲೆಯ 5 ಗೇರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಭರಮಸಾಗರ ಹೋಬಳಿಯ ದರ್ಶನ್ ಕೆ.ಜಿ. (19), ದಾವಣಗೆರೆಯ ಓಂಕಾರೇಶ್‌. (18) ಹಾಗೂ ಯಶವಂತ (19) ಬಂಧಿತರು.

ಕಳೆದ ನ.5ರಂದು ಆಂಜನೇಯ ಬಡಾವಣೆಯ ರಾಜೇಶ್ವರಿ ಅವರು ಮನೆ ಮುಂದೆ ನಿಲ್ಲಿಸಿದ್ದ ಸೈಕಲ್ ಕಳ್ಳತನವಾಗಿದ್ದಾಗಿ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!