ಚೌಟ್ರಿ ಕಳ್ಳತನ ಪ್ರಕರಣ ಪತ್ತೆ : ಆಭರಣ ವಶ

ದಾವಣಗೆರೆ, ಡಿ.5-  ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪತ್ತೆ ಮಾಡಿ ಆತನಿಂದ 1.40 ಲಕ್ಷ ರೂ. ಬೆಲೆಯ 23 ಗ್ರಾಂ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.  ಹೊಳಲ್ಕೆರೆ ತಾಲ್ಲೂಕು ಶಿವಗಂಗಾ ಗ್ರಾಮದ ಶ್ವೇತಾ ಎಂ.ಆರ್. ಅವರು ಮದುವೆಗೆೆಂದು ನಗರದ ಜಯದೇವಪ್ಪ ಕಲ್ಯಾಣ ಮಂಟಪಕ್ಕೆ ಬಂದು ಕೊಠಡಿಯಲ್ಲಿ ಚಿನ್ನಾಭರಣದ ಬ್ಯಾಗ್ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು. ನಂತರ ನೋಡಲಾಗಿ ಬೀಗ ಒಡೆದು ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಅವರು ಕಳೆದ ಜೂ.5ರಂದು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.

error: Content is protected !!