ನಗರದಲ್ಲಿ ಇಂದು ಸಾಂಸ್ಕೃತಿಕ ಸಂಗೀತ

ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಾವಣಗೆರೆ ದಕ್ಷಿಣ ವಲಯದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ `ಮಕ್ಕಳಿಗಾಗಿ ಸಾಂಸ್ಕೃತಿಕ ಸಂಗೀತ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ರವಿಕುಮಾರ್‌ ಎ.ಜೆ. ವಹಿಸುವರು. ಮುಖ್ಯ ಅತಿಥಿಗಳಾಗಿ  ಎಂ.ವಿ. ವೆಂಕಟೇಶ್‌, ಶ್ರೀಮತಿ ಉಮಾ ಪ್ರಶಾಂತ್‌, ವಿನಾಯಕ ಪೈಲ್ವಾನ್‌,  ಶ್ರೀಮತಿ ರೇಣುಕಾ, ಶಿವನಹಳ್ಳಿ ರಮೇಶ್‌, ರವಿಚಂದ್ರ, ಕೊಟ್ರೇಶ್‌ ಜಿ., ಶಿವಪ್ಪ ಎನ್‌., ರಾಮಪ್ಪ ಆಗಮಿಸುವರು. ನಂತರ ಶರಣಯ್ಯ ಎಂ. ಗುಡ್ಡಮಠ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯುವುದು.

error: Content is protected !!