ಹಿರೇಬಿದರಿ ಶ್ರೀ ಹಠಯೋಗಿ ಈಶ್ವರಾನಂದ ಆರೂಢ ಮಹಾಸ್ವಾಮಿಗಳವರ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹರಿಹರ ತಾಲ್ಲೂಕು ಸಾರಥಿ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದೆ.
ಶ್ರೀ ಈಶ್ವರಾನಂದ ಆರೂಢ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು. ನಂತರ ಬೆಳಿಗ್ಗೆ 10 ಗಂಟೆಗೆ ಧರ್ಮ ಸಭೆ ಜರುಗುವುದು. ದಿವ್ಯಸಾನ್ನಿಧ್ಯವನ್ನು ಶ್ರೀ ಸಚ್ಚಿದಾನಂದ ಅವಧೂತರು ವಹಿಸಲಿದ್ದು, ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗಜದಂಡ ಸ್ವಾಮೀಜಿ, ಶಾಂತಯ್ಯ ಶ್ರೀ, ಶಾಂತಮುತ್ಯಾ ಅವಧೂತಮಠ, ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಧಾನ ಧರ್ಮದರ್ಶಿ ಸಿದ್ದನಗೌಡ ಪ್ರಭುಗೌಡ ಪಾಟೀಲ, ಸತ್ಯಶಿವಾನಂದ ಅವಧೂತಮಠ ಪಾಲ್ಗೊಳ್ಳುವರು.