ದಾವಣಗೆರೆ, ನ. 20 – ನಮ್ಮ ಚೆಲುವ ಕನ್ನಡ ನಾಡು `ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷಗಳಾದವು. ಕರ್ನಾಟಕದ ಈ ಸುವರ್ಣ ಸಂಭ್ರಮದ ಅಂಗವಾಗಿ ವರ್ಷ ಪೂರ್ತಿ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂಭ್ರಮವನ್ನು ಅರ್ಥಪೂರ್ಣಗೊಳಿಸಲು ನಗರದ ಸುಶ್ರಾವ್ಯ ಸಂಗೀತ ವಿದ್ಯಾಲಯವು `ಕನ್ನಡದಾರತಿ’ ಎಂಬ ವಿನೂತನ ಪರಿಕಲ್ಪನೆಯೊಂದನ್ನು ಯೋಜಿಸಿದೆ. ಇದರ ಅಡಿಯಲ್ಲಿ ವರ್ಷಪೂರ್ತಿ ಕನ್ನಡ ನಾಡು-ನುಡಿ ಮಹತ್ವವನ್ನು ಬಿಂಬಿಸುವ 50 ಆಯ್ದ ಗೀತೆಗಳ ಗಾಯನ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಶಿಬಿರದಲ್ಲಿ 5 ಗೀತೆಗಳ ತರಬೇತಿ ನೀಡಲಿದ್ದು ಒಟ್ಟು 10 ಶಿಬಿರಗಳನ್ನು ಆಯೋಜಿಸಲಾಗುವುದು.
ಪ್ರಥಮ ತರಬೇತಿ ಶಿಬಿರ ಕನ್ನಡದಾರತಿ- 1 `ಸಾವಿರದ ಶರಣವ್ವ ಕನ್ನಡದ ತಾಯೆ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದ್ದು, ಈ ಶಿಬಿರದಲ್ಲಿ ಕನ್ನಡದ ಪ್ರಸಿದ್ಧ ಕವಿಗಳ 5 ಗೀತೆಗಳನ್ನು ಕರೋಕೆಯೊಂದಿಗೆ ಹಾಡುವ ತರಬೇತಿಯನ್ನು ನೀಡಲಾಗುವುದು.
ಸುಶ್ರಾವ್ಯ ಸಂಗೀತ ವಿದ್ಯಾಲಯ ನಿರ್ದೇಶಕರಾದ ಶ್ರೀಮತಿ ಯಶಾ ದಿನೇಶ್ ಅವರು ಗಾಯನದ ತರಬೇತಿಯನ್ನು ಇದೇ ದಿನಾಂಕ 26ರ ಭಾನುವಾರ ನೀಡಲಿದ್ದಾರೆ. ಎಲ್ಲಾ ವಯೋಮಾನದ ಆಸಕ್ತರು (ಪುರುಷ/ಮಹಿಳೆ) ಭಾಗವಹಿಸಬಹುದು. ವಿವರಗಳಿಗೆ 9449808886ಗೆ ಸಂದೇಶದ ಮೂಲಕ ಸಂಪರ್ಕಿಸಬಹುದು.