ನಗರದಲ್ಲಿ ಸತ್ಯಸಾಯಿ ಬಾಬಾರವರ 98ನೇ ಜನ್ಮ ದಿನೋತ್ಸವ

ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 98ನೇ ಜನ್ಮ ದಿನೋತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಗೆ `ಸೇವಾನಿಕೇತನ ಶಾಲೆಯ (ಬುದ್ಧಿ ಮಾಂಧ್ಯ ಮಕ್ಕಳಿಗೆ) ವಿದ್ಯಾರ್ಥಿಗಳಿಗೆ ಆಟೋಪಕರಣಗಳ ವಿತರಣೆ, ನಾಳೆ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದ ಅಂಧ ಮಕ್ಕಳಿಗೆ ಆಹಾರ ಪದಾರ್ಥಗಳು ಮತ್ತು ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. 

ಸೇವಾ ಕಾರ್ಯಗಳ ನಿರ್ವಹಣೆಯನ್ನು ಶ್ರೀಮತಿ ರಂಜನಿ, ರವಿ ಕೆ., ನಾಗರಾಜ್‌ ಉತ್ತಂಗಿ, ಪ್ರಸನ್ನ ಎಂ. ನಿರ್ವಹಿಸುವರು.

error: Content is protected !!