ಹರಿಹರದಲ್ಲಿ ಇಂದು ಮಹಿಳಾ ವಿಚಾರ ಗೋಷ್ಠಿ

ಹರಿಹರದಲ್ಲಿ ಇಂದು  ಮಹಿಳಾ ವಿಚಾರ ಗೋಷ್ಠಿ

ಶ್ರೀ ಎಂ.ಪಿ. ಗುರುಸಿದ್ದಸ್ವಾಮಿ ಸಭಾಂಗಣದಲ್ಲಿ ಎಸ್.ಜೆ.ವಿ.ಪಿ. ಮಹಾವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಐಕ್ಯೂಎಸಿ ಅಡಿಯಲ್ಲಿ ಹಾಗೂ ಸ್ಫೂರ್ತಿ ಪ್ರಕಾಶನ (ತೆಲಿಗಿ – ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ಶ್ರೀಶೈಲ ಜಗದ್ಗುರುಗಳವರ 51ನೇ ಜನ್ಮ ದಿನ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ 10.30ಕ್ಕೆ ಮಹಿಳಾ ವಿಚಾರ ಗೋಷ್ಠಿ ನಡೆಯಲಿದೆ.

ಜ.ಪಂ.ವಿ. ವಿದ್ಯಾಪೀಠದ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಹಾಗೂ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್‌ ದುಗ್ಗತ್ತಿಮಠ ಅವರ ಗೌರವ ಉಪಸ್ಥಿತಿಯಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪುರಸ್ಕೃತರಾದ ಡಾ. ಬಿ. ಮಂಜಮ್ಮ ಜೋಗತಿ ಆಗಮಿಸುವರು. 

ಹರಿಹರ ಎಸ್.ಜೆ.ವಿ.ಪಿ. ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಹೆಚ್. ಶಿವಗಂಗಮ್ಮ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಕೆ.ಹೆಚ್. ಗಾಯತ್ರಿ, ಎಂ. ಪೂರ್ಣಿಮಾ, ಶ್ರೀಮತಿ ಅಶ್ವಿನಿ ಕೃಷ್ಣ, ಎಂ. ಬಸವರಾಜ್, ಎಸ್.ಎಂ. ಮಲ್ಲಮ್ಮ ನಾಗರಾಜ್,  ಎಸ್.ಜಿ. ಶಾರದಮ್ಮ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೆ.ಎಸ್. ವೀರಭದ್ರಪ್ಪ ತೆಲಿಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಮೇಶ್ ಪರ್ವತಿ ಪ್ರಾಸ್ತಾವಿಕ ನುಡಿಗಳನ್ನಾಡುವರು.

error: Content is protected !!