ಕೊಟ್ಟೂರು, ನ.6 – ಕೊಟ್ಟೂರು ತಹಶೀಲ್ದಾರರಾಗಿ ಕುಮಾರಸ್ವಾಮಿಯವರು ವರ್ಗಾವಣೆಯಾದ ನಂತರ ಖಾಯಂ ತಹಶೀಲ್ದಾರ್ ಇಲ್ಲದೇ ಕೊಟ್ಟೂರಿನ ಆಡಳಿತದಲ್ಲಿ ವ್ಯತ್ಯಯವುಂಟಾಗಿತ್ತು.
ನಂತರ ಪ್ರಭಾರಿಯಾಗಿ ಅಮರೇಶ್.ಜಿ.ಕೆ.ರವರು ಪರೀಕ್ಷಾರ್ಥ, ತದನಂತರ ಕಾರ್ತಿಕ್‌ರವರು ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ್ದರು. ಸೋಮವಾರ ಕೊಟ್ಟೂರಿಗೆ ಮುಂದಿನ ಆದೇಶದವರೆಗೆ ತಹಶೀಲ್ದಾರರನ್ನಾಗಿ ಅಮರೇಶ್.ಜಿ.ಕೆ. ಅವರನ್ನೇ ನೇಮಿಸಿ ಸರ್ಕಾರದ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪ್ರಭಾರಿ ತಹಶೀಲ್ದಾರರಾಗಿ ಕಾರ್ಯನಿರ್ವ ಹಿಸಿ ಅನುಭವವಿರುವ ಅಮರೇಶ್ ಅವರಿಗೆ ಕೊಟ್ಟೂರಿನ ಸಮಗ್ರ ಮಾಹಿತಿ ಇರುವುದರಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಜನರ ಭರವಸೆಗಳನ್ನು ಈಡೇರಿಸುವ ಹೊಸ ಮಂದಹಾಸ ಸಾರ್ವಜನಿಕರಲ್ಲಿ ಮೂಡಿದೆ.