ರಾಷ್ಟ್ರೀಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನಿಂದ 53 ಕ್ವಿಂ. ಅಕ್ಕಿ ಸಮರ್ಪಣೆ

ಸಾಣೇಹಳ್ಳಿ, ಸೆ.22- ಸಾಣೇಹಳ್ಳಿಯಲ್ಲಿ ನವೆಂಬರ್ 2 ರಿಂದ ನಡೆಯುವ  ರಾಷ್ಟ್ರಿಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನ ತರಳಬಾಳು ಯುವ ವೇದಿಕೆ ಮತ್ತು ತಾಲ್ಲೂಕಿನ ಸಾಧು ವೀರಶೈವ ಸಮಾಜದವರು 53 ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು. 

ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಿರುವುದು ಸಂತೋಷ. ಪ್ರತಿಯೊ ಬ್ಬರೂ ಇಷ್ಟಲಿಂಗ ಧರಿಸಿದರೆ ದುರ್ವ್ಯಸನ, ದುರಾಚಾರ ದೂರವಾಗುವವು. ಆದುದ ರಿಂದ ಲಿಂಗದೀಕ್ಷೆ ಪಡೆಯಬೇಕೆಂದು ಶ್ರೀಗಳು ಸಲಹೆ ನೀಡಿದರು. 

ಇದರಿಂದ ಧರ್ಮದ ದಾರಿಯಲ್ಲಿ ನಡೆದು ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗುವುದು. ವ್ಯಕ್ತಿ ಪರಿಶುದ್ಧವಾಗಿದ್ದರೆ ಸಮಾಜವೂ ಶುದ್ಧವಾಗುವುದು. ಈ ನೆಲೆಯಲ್ಲಿ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಬೇಕು. ಆಗ ಮನ, ಮನೆ, ಸಮಾಜದಲ್ಲಿ ಸುಧಾರಣೆಯಾಗುವುದು ಎಂದು ಹೇಳಿದರು.

ಕಲೆ, ಸಾಹಿತ್ಯ, ಸಂಗೀತದ ಒಲವು ಬೆಳೆಸಿಕೊಂಡು ಸುಸಂಸ್ಕೃತ ಜೀವನ ನಡೆಸುವಂತಾಗಲಿ ಎಂದು ಹಾರೈಸಿದ ಶ್ರೀಗಳು, ಕಲೆಗೆ ನೆರವು ನೀಡುವ ನಿಮ್ಮ ಸದ್ಭಾವನೆಗಳು ಹೀಗೇ ಮುಂದುವರೆದು ಇತರರಿಗೂ ಆದರ್ಶವಾಗಲಿ ಎಂದರು. 

ಈ ಸಂದರ್ಭದಲ್ಲಿ ಭದ್ರಾವತಿ ತಾಲ್ಲೂಕು  ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಜಿ. ರವಿಕುಮಾರ್, ಉಪಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ಭರಣೇಶ್, ಸಹ ಕಾರ್ಯದರ್ಶಿ ಬಿ. ಎಸ್. ಪರಮೇಶ್ವರಪ್ಪ, ಖಜಾಂಚಿ ನವೀನ್, ಸದಸ್ಯರಾದ ಮಲ್ಲಿಕಾರ್ಜುನ್, ವಸಂತಕುಮಾರ್, ಮಮತ ನರೇಂದ್ರ, ನಾಗರಾಜ, ಮಹೇಶ್ವರಪ್ಪ,  ದಿನೇಶ್, ಆಶಾರಾಣಿ, ಮಹಾದೇವಪ್ಪ, ಎ ಎಸ್ ರವಿಕುಮಾರ, ರಾಜಕುಮಾರ, ಸತೀಶ್‍ಗೌಡ, ರುದ್ರಪ್ಪ, ಶಿವಕುಮಾರ್, ಮತ್ತಿತರರಿದ್ದರು.

error: Content is protected !!