ದಾವಣಗೆರೆ, ಅ.16- ಹೆಸರಾಂತ ಆಹಾರ ತಜ್ಞ ಮತ್ತು ಚಿಂತಕ ಕೆ.ಸಿ.ರಘು ಅವರ ನಿಧನಕ್ಕೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿದೆ. ಪಠ್ಯಪುಸ್ತಕಗಳ ತಿರುಚುವಿಕೆಯ ವಿರುದ್ದದ ಹೋರಾಟದಲ್ಲಿ ನಮ್ಮೊಂದಿಗೆ ಇದ್ದ ರಘು, ಅತಿಥಿ ಶಿಕ್ಷಕರ ಬಗ್ಗೆ ಅಧ್ಯಯನಶೀಲತೆ, ಶಿಕ್ಷಣದ ಕೋಮುವಾದೀಕರಣ ಮತ್ತು ಕಾರ್ಪೋರೇಟ್ ವಿರುದ್ದದ ಗಟ್ಟಿ ಧ್ವನಿಯಾಗಿದ್ದರು. ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷರೂ ಆಗಿದ್ದ ಅವರ ಅಗಲಿಕೆಯಿಂದ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಸಾರ್ವತ್ರಿಕ ಶಿಕ್ಷಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ನಷ್ಟವಾಗಿದೆ ಎಂದು ಶಿಕ್ಷಣ ಉಳಿಸಿ ಸಮಿತಿ ತಿಳಿಸಿದೆ.
January 9, 2025