ರಾಣೇಬೆನ್ನೂರು, ಅ.6- ಕ್ರೀಡಾ ಇಲಾಖೆ ಯಿಂದ ಮಾನ್ಯತೆ ಪಡೆಯದ ತೀರ್ಪುಗಾರರನ್ನು ನೇಮಿಸಿಕೊಂಡು ಜಿಲ್ಲಾ ಮಟ್ಟದ ಶಾಲಾ-ಕಾಲೇಜು ಕರಾಟೆ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಅದನ್ನು ಪ್ರತಿಭಟಿಸುತ್ತಿರುವುದಾಗಿ ಹಾವೇರಿ ಜಿಲ್ಲಾ ಕರಾಟೆ ಅಸೋಸಿಯೇಷನ್ ತಿಳಿಸಿದೆ.
ತರಬೇತಿ ಹೊಂದಿ, ರಾಜ್ಯ ಕರಾಟೆ ಸಂಸ್ಥೆಯ ಮನ್ನಣೆ ಪಡೆದ ನಮ್ಮ ಸಂಸ್ಥೆಯ ತೀರ್ಪುಗಾರರನ್ನು ಕರೆಯದೇ, ಅನಧಿಕೃತ ತೀರ್ಪುಗಾರರನ್ನು ನೇಮಿ ಸಿಕೊಂಡಿರುವ ಕಾರಣ ನಮಗೆ ಅನ್ಯಾಯವಾಗು ತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅದನ್ನು ನಿರ್ಲಕ್ಷಿಸಿ ಇಂದು ಸ್ಪರ್ಧೆ ಏರ್ಪಡಿಸಲಾ ಗಿದೆ ಎಂದು ಜಿಲ್ಲಾ ಸಂಸ್ಥೆಯವರು ವಿವರಿಸಿದ್ದಾರೆ.
ಸ್ಪರ್ಧೆಗಳ ಬಗ್ಗೆ ಜಿಲ್ಲೆಯಾದ್ಯಂತ ಪ್ರಚುರ ಪಡಿಸದೆ ತಮಗೆ ಬೇಕಾದ ಕ್ರೀಡಾಪಟುಗಳನ್ನೂ ಹಾಗೂ ಅನಧಿಕೃತ ತೀರ್ಪುಗಾರರನ್ನು ನೇಮಿಸಿ ಕೊಂಡು ಸ್ಪರ್ಧೆ ನಡೆಸಿ, ರಾಜ್ಯ ಸ್ಪರ್ಧೆಗೆ ತೆರಳಿದ ಜಿಲ್ಲೆಯ ಪಟುಗಳು ಯಾವುದೇ ಪದಕ ಗಳಿಸದೇ ಮರಳುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರವಾಸಿಮಂದಿರದಲ್ಲಿ ನಡೆಸಿದ ಗೋಷ್ಠಿಯಲ್ಲಿ ಡಿಳ್ಳೆಪ್ಪ ಅನಿಂಗೇರ, ಮನೀಷಾ ಕಬ್ಬೂರ, ಸಮೀರ ಬಳ್ಳಾರಿ, ನಾಗರಾಜ ಸುಣಗಾರ, ದಾವಲ್ ಮಲ್ಲಿಕ ಮತ್ತಿತರರಿದ್ದರು.