ಅಬಕಾರಿ ಇಲಾಖೆಯು ಕುಡುಕರ ರಾಜ್ಯ ಮಾಡಲು ಹೊರಟಿದೆಯೇ?

ಅಬಕಾರಿ ಇಲಾಖೆಯು ಕುಡುಕರ ರಾಜ್ಯ ಮಾಡಲು ಹೊರಟಿದೆಯೇ?

ಸಾಣೇಹಳ್ಳಿ, ಸೆ.  28-  ಅಬಕಾರಿ ಇಲಾಖೆ  ಮತ್ತು ಅಬಕಾರಿ ಮಂತ್ರಿಗಳ ಹೊಸ ಅಜೆಂಡಾ ನೋಡಿ ತುಂಬಾ ವೇದನೆಯಾಯ್ತು. ಇವರಿಗೆ ಯಾರು ಬುದ್ಧಿ ಹೇಳಬೇಕು ಎನ್ನುವುದೇ ತಿಳಿಯದಾಗಿದೆ. ಕರ್ನಾಟಕವನ್ನು ಕುಡುಕರ ರಾಜ್ಯವ ನ್ನಾಗಿಸಿ ತಮ್ಮ ಅಧಿಕಾರವನ್ನು ಸ್ಥಿರಗೊಳಿ ಸಿಕೊ ಳ್ಳುವ ಸಂಚು ಇದರ ಹಿಂದಿದೆಯೇ ?  ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಈಗಾಗಲೇ ಕುಡುಕರ ಹಾವಳಿ ಹೆಚ್ಚಾಗಿ ಸಂಪತ್ತು, ಆರೋಗ್ಯ, ಮರ್ಯಾದೆ, ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಪಾರ್ಥೇನಿ ಯಂನಂತೆ ಬೆಳೆಯು ತ್ತಿರುವುದನ್ನು ಜನಪ್ರತಿನಿಧಿಗಳು ಗಮನಿಸದಿರುವುದು ವಿಷಾದನೀಯ. 

ಜನರ ಆರೋಗ್ಯ, ಆರ್ಥಿಕ ಮತ್ತು ನೈತಿಕ ಮೌಲ್ಯ ಗಳನ್ನು ಎತ್ತಿಹಿಡಿಯ ಬೇಕಾದ್ದು ಜನಪರ ನೇತಾರನ ಜವಾಬ್ದಾರಿ. ಕ್ಷಣಿಕ ಲಾಭಕ್ಕಾಗಿ ಎಲ್ಲ ಆದ ರ್ಶ ಗಳನ್ನು ಗಾಳಿಗೆ ತೂರುವ ನೇತಾರರು ಬುದ್ಧ, ಬಸವಣ್ಣ, ಟಿಪ್ಪು, ಗಾಂಧಿ ಮತ್ತಿತರೆ ದಾರ್ಶನಿಕರ ಚಿಂತನೆಗಳನ್ನು ಜಾರಿಗೆ ತರುವುದು ಯಾವಾಗ? ಮದ್ಯದ ದುಷ್ಪರಿಣಾಮ ಅನುಭವಿಸುತ್ತಿರುವ ಕುಟುಂಬದವರು ಮೌನ ವಹಿಸದೆ  ಈಗಲಾದರೂ ಸರ್ಕಾರದ ಧೋರಣೆಯ ವಿರುದ್ಧ ಬಂಡೇಳುವ ಕಾರ್ಯವನ್ನು ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

ಸಮಾಜಮುಖಿ ಚಿಂತಕರು, ಸಾಮಾಜಿಕ ಕಳಕಳಿಯುಳ್ಳ ಸಂಘಟನೆ ಗಳು ಮುಖ್ಯವಾಗಿ ಮಠಾ ಧೀಶರು ಈಗಲಾದರೂ ಧ್ವನಿಯೆತ್ತಿ ತಮ್ಮ ತಮ್ಮ ವಲಯ ದಲ್ಲಿ ಹೋರಾಟ ಮಾಡುವ ಸಂಕಲ್ಪ ಸ್ವೀಕರಿಸಬೇಕು. ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲವೆಂದು ನಮಗೂ ಗೊತ್ತು. ಹಾಗಂತ ಅದನ್ನು ಸ್ವಾಗತಿಸಬೇಕು ಎಂದಲ್ಲ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸರ್ಕಾರ ಎಚ್ಚೆತ್ತು ಸಾವಿರ ಮದ್ಯದಂಗಡಿಯ ಯೋಜನೆ ಯನ್ನು ಬಿಟ್ಟು ಜನರ ಆರ್ಥಿಕ, ನೈತಿಕ ಮೌಲ್ಯಗಳನ್ನು ಕಾಪಾಡುವ, ಆರೋಗ್ಯ ಭಾಗ್ಯ ಕರುಣಿಸುವ ಹೃದಯ ವಂತಿಕೆ ಮೆರೆಯಲಿ ಎಂದು ಸ್ವಾಮೀಜಿ ಬಯಸಿದ್ದಾರೆ. 

error: Content is protected !!