ನಗರದಲ್ಲಿ ಇಂದು ಬಾಪೂಜಿ ಹೆಲ್ತ್ ಕಾರ್ಡ್ ಬಿಡುಗಡೆ

ದಾವಣಗೆರೆ, ಸೆ.21- ಜನ ಸಾಮಾನ್ಯರಿಗೆ ವೈದ್ಯಕೀಯ ಸೇವೆಯನ್ನು ರಿಯಾಯಿತಿ ದರದಲ್ಲಿ ನೀಡಲು ಬಾಪೂಜಿ ಹೆಲ್ತ್ ಕಾರ್ಡ್ ಆರಂಭಿಸ ಲಾಗುತ್ತಿದೆ ಎಂದು ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಡಾ.ಅರುಣ್ ಕುಮಾರ್ ಅಜ್ಜಪ್ಪ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆಗೆ ರಿಯಾಯಿತಿ ದರದಲ್ಲಿ ವೈದ್ಯ ಕೀಯ ಸೇವೆ ನೀಡಬೇಕೆಂಬುದು ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಆಶಯವಾಗಿದ್ದು, ಈ ಹಿನ್ನೆಲೆಯಲ್ಲಿ  ಬಾಪೂಜಿ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.  ಶುಕ್ರವಾರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮ ದಿನಾಚರಣೆ ಇದ್ದು, ಅಂದು ಬೆಳಿಗ್ಗೆ 12 ಗಂಟೆಗೆ ಸಚಿವರ ಗೃಹ ಕಚೇರಿಯಲ್ಲಿ ಕಾರ್ಡ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ಬಾಪೂಜಿ ಸಮೂಹ ಆಸ್ಪತ್ರೆಗಳಾದ ಬಾಪೂಜಿ ಆಸ್ಪತ್ರೆ, ಎಸ್.ಎಸ್. ಹೈಟೆಕ್ ಆಸ್ಪತ್ರೆ, ಬಾಪೂಜಿ ಮಕ್ಕಳ ಆಸ್ಪತ್ರೆ, ಬಾಪೂಜಿ ಕಣ್ಣಿನ ಆಸ್ಪತ್ರೆ, ಎಸ್.ಎಸ್. ಸ್ಪರ್ಶ ಆಸ್ಪತ್ರೆ ಹಾಗೂ ಎಸ್.ಎಸ್. ನಾರಾಯಣ ಹೃದಯಾಲಯದಲ್ಲಿ ರಿಯಾಯಿತಿ ಕಾರ್ಡ್ ಸೌಲಭ್ಯ ಪಡೆಯ ಬಹುದಾಗಿದೆ ಎಂದು ಮಾಹಿತಿ ನೀಡಿದರು.

ಬಾಪೂಜಿ  ಹೊರ ರೋಗಿಗಳ ವಿಭಾಗ,
ಕೆ.ಆರ್. ರಸ್ತೆಯ ಬಾಪೂಜಿ ಆಸ್ಪತ್ರೆ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಹೆಲ್ತ್‌ ಕಾರ್ಡ್ ಗಳ ನ್ನು ಪಡೆಯಬಹುದಾಗಿದ್ದು, ಮುಂದಿನ ದಿನಗಳಲ್ಲಿ ನಗರದ ವಾರ್ಡುಗಳಲ್ಲಿ ಕಾರ್ಡುಗಳನ್ನು ವಿತರಿಸ ಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೈದ್ಯಕೀಯ ಚಿಕಿತ್ಸೆ ಪಡೆದವರು ಶುಲ್ಕದಲ್ಲಿ ರಿಯಾಯಿತಿಗಾಗಿ ಸಚಿವರು, ಶಾಸಕರ ಶಿಫಾರಸ್ಸು ತರಲು ಯತ್ನಿಸುತ್ತಿದ್ದರು. ಇದರಿಂದ ಮುಕ್ತಿ ಹೊಂದಿ ಎಲ್ಲರೂ ರಿಯಾಯ್ತಿ ಸೌಲಭ್ಯ ಪಡೆಯಲಿ ಎಂಬುದು ಸಚಿವ ಮಲ್ಲಿಕಾರ್ಜುನ್ ಅವರ ಇಚ್ಛೆಯಾಗಿತ್ತು ಎಂದು ಹೇಳಿದರು.

ಡಾ.ಸಂಪನ್ನ ಮುತಾಲಿಕ್ ಮಾತನಾಡಿ, ಜಿಲ್ಲಾದ್ಯಂತ ಶೇ.50ರಷ್ಟು ಜನರಿಗೆ ರಿಯಾಯಿತಿ ಕಾರ್ಡ್ ತಲುಪಿಸುವ ಗುರಿ ಹೊಂದಲಾಗಿದೆ. ಆಧಾರ್ ಕಾರ್ಡ್ ನಂಬರ್ ನೀಡಿ ರಿಯಾಯಿತಿ ಕಾರ್ಡ್ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ವಾರ್ಡ್ ವಾರು ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ರೋಗಿಗಳು ಹಾಗೂ ಕುಟುಂಬದವ ರೊಂದಿಗೆ ಸೌಜನ್ಯದಿಂದ ವರ್ತಿಸುವ ಕುರಿತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಒಂದು ತಿಂಗಳು ತರಬೇತಿ ನೀಡಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶುಕ್ಲಾ ಶೆಟ್ಟಿ,
ಡಾ.ಸಂಪನ್ನ ಮುತಾಲಿಕ್, ಡಾ.ಬಿ.ಎಸ್. ಪ್ರಸಾದ್, ಡಾ.ಮೂಗನಗೌಡ, ಡಾ.ಧನ್ಯಕು ಮಾರ್, ಬಿ.ಎನ್. ಮಲ್ಲೇಶ್ ಉಪಸ್ಥಿತರಿದ್ದರು.

error: Content is protected !!