ವೃತ್ತಿ ನಿರತ ಇಂಜಿನಿಯರ್ ಅಸೋಸಿಯೇಷನ್ ವತಿಯಿಂದ ಇಂದು ಸಂಜೆ 5.30 ಕ್ಕೆ ಓಂಕಾರ ಮಠದ ಸಭಾಂಗಣದಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಾಯ ಅವರ 163 ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವೃತ್ತಿ ನಿರತ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಜಿ.ಪಿ. ನಾಗರಾಜ್ ಹಾಗೂ ಕಾರ್ಯದರ್ಶಿ ಕೆ.ಬಿ. ರಾಜಶೇಖರ್ ತಿಳಿಸಿದ್ದಾರೆ.
ಬೆಳಗ್ಗೆ 10 ಕ್ಕೆ ವಿಶ್ವೇಶ್ವರಾಯನವರ ಭಾವಚಿತ್ರದ ಮೆರವಣಿಗೆಯನ್ನು ಪಕ್ಕೀರಸ್ವಾಮಿ ಮಠದದಿಂದ ಹರಿಹರೇ ಶ್ವರ ದೇವಾಲಯದ ಆವರಣದವರೆಗೆ ನಡೆಸಲಾಗುವುದು.
ಸಂಜೆ 5.30 ಕ್ಕೆ ಶ್ರೀ ಓಂಕಾರ ಮಠದ ಸಭಾಂಗಣದಲ್ಲಿ ವೇದಿಕೆಯ ಕಾರ್ಯಕ್ರಮವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಕೆ.ಇ.ಟಿ. ಶಾಲೆಯ ಆಡಳಿತಾಧಿಕಾರಿ ಡಾ.ಬಿ.ಟಿ. ಅಚ್ಯುತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಭಾಗವಹಿಸಲಿದ್ದಾರೆ. ಸಾಧಕರಿಗೆ ಗೌರವ ಸಮರ್ಪಣೆ ಡಿ.ಆರ್.ಡಿ.ಓ ಬೆಂಗಳೂರು ಹಿರಿಯ ವಿಜ್ಞಾನಿ ವೀಣಾ ಗಿರೀಶ್ ದೀಕ್ಷಿತ್, ಸಮಾರಂಭದ ಅಧ್ಯಕ್ಷತೆಯನ್ನು ಇಂಜಿನಿಯರ್ ಅಸೋಸಿ ಯೇಷನ್ ಅಧ್ಯಕ್ಷ ಜಿ.ಪಿ. ನಾಗರಾಜ್ ವಹಿಸಲಿದ್ದಾರೆ. ದಾಸರ ಗುಡ್ಡಪ್ಪ ಕಟ್ಟಡ ಮೇಸ್ತ್ರಿ, ಬಿ. ಶಂಕರಾಚಾರ್ ಬಡಗಿ ಇತರರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ.