ಹರಿಹರದಲ್ಲಿ 9 ರಂದು ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಹರಿಹರ, ಆ.2- ನಗರದ ಶ್ರೀ 108 ಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿರುವ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 9 ರ ಬುಧವಾರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಆಡಿ ಕೃತ್ತಿಕ ಪೂಜೆಯ ನಿಮಿ ತ್ತವಾಗಿ ಬೆಳಗ್ಗೆ 8-30 ಕ್ಕೆ ಪುಣ್ಯಾಹ ಮಹಾ ಸಂಕಲ್ಪ, 9 ಗಂಟೆಗೆ ಮಹಾ ಮಸ್ತಕಾಭಿಷೇಕ, ಅಲಂಕಾರ, 12 ಗಂಟೆಗೆ ದೀಪಾರಾಧನೆ ಮಹಾಮಂಗಳಾರತಿ, 12-30 ಮಹಾ ಪ್ರಸಾದ ವಿನಿಯೋಗ, ಸಂಜೆ 7-30 ಕ್ಕೆ ದೀಪ ನಮಸ್ಕಾರ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

error: Content is protected !!