ಗ್ಯಾರಂಟಿಗಳ ಜಾರಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್: ಎಸ್‌ಯುಸಿಐ ಟೀಕೆ

ದಾವಣಗೆರೆ,ಜು.8- ಮುಖ್ಯಮಂತ್ರಿ  ಸಿದ್ದರಾಮಯ್ಯ ತಮ್ಮ ಚುನಾವಣಾ ಭರವಸೆಗಳಾದ 5 ಗ್ಯಾರಂಟಿಗಳ ಜಾರಿಗೆ ಹೆಚ್ಚು ಒತ್ತು ನೀಡಿರುವ ಬಜೆಟ್ ಇದಾಗಿದೆ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ  ಟೀಕಿಸಿದೆ.

  ಆದರೆ ಇತರೆ ಆದ್ಯತಾ ವಲಯಗಳನ್ನು ಕೈಬಿಟ್ಟಿರುವ ಕ್ರಮಕ್ಕೆ ಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾದ ವಿದ್ಯಾರ್ಥಿವೇತನಗಳ ಮರು ಜಾರಿ, ಸ್ವಿಗ್ಗಿ, ಜೊಮ್ಯಾಟೊ ಅಂತಹ ಗಿಗ್ ನೌಕರರಿಗೆ ವಿಮಾ ಯೋಜನೆ, ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗೆ ನೀಡುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ವಿತರಣೆಯನ್ನು ವರ್ಷದಲ್ಲಿ 6 ರಿಂದ  12 ತಿಂಗಳುಗಳಿಗೆ ವಿಸ್ತರಣೆ ಮುಂತಾದ ಕ್ರಮಗಳನ್ನು ಎಸ್ ಯುಸಿಐ(ಸಿ) ಸ್ವಾಗತಿಸುತ್ತದೆ.

  ಆದರೆ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹಿಂದಿನ ಬಜೆಟಿನಲ್ಲಿ ಘೋಷಿಸಿದ್ದ ಗೌರವ ಧನ ಏರಿಕೆಯನ್ನು ಕೈಬಿಟ್ಟು ಅವರನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಪರಿಗಣಿಸಿರುವುದು,  ರೈತರಿಗೆ ಬೆಂಬಲ ಬೆಲೆಗೆ ಸೂಕ್ತ ಕ್ರಮ ಇಲ್ಲದಿರುವುದು- ಇಂತಹ ಹಲವು ಅಂಶಗಳು ಈ ಬಜೆಟ್ಟನ್ನು ಜನವಿರೋಧಿಯನ್ನಾಗಿಸಿವೆ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ತಿಳಿಸಿದ್ದಾರೆ 

error: Content is protected !!