ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಸದಸ್ಯರಾಗಿ ಒಡೆಯರ್

ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಸದಸ್ಯರಾಗಿ ಒಡೆಯರ್ - Janathavaniದಾವಣಗೆರೆ, ಮೇ 25- ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ನಗರದ `ಪವಿತ್ರ ಪ್ರಜಾ’ ಸಂಪಾದಕ ಎಸ್.ಕೆ. ಒಡೆಯರ್ ನೇಮಕಗೊಂಡಿದ್ದಾರೆ.

ಈವರೆಗೂ ಈ ಸ್ಥಾನದಲ್ಲಿದ್ದ ಜಗಳೂರಿನ ಕೊಟ್ರೇಶ್ ಅಣಬೂರ್ ಮಠ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆಯ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಒಮ್ಮತದ ತೀರ್ಮಾನದಂತೆ ಒಡೆಯರ್ ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಸಂಘದ ಶಿಫಾರಸ್ಸಿನ ಮೇರೆಗೆ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಈ ನೇಮಕ ಮಾಡಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ತಿಳಿಸಿದ್ದಾರೆ.

ಒಡೆಯರ್ ಅವರನ್ನು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ಖಜಾಂಚಿ ಎನ್.ವಿ. ಬದರೀನಾಥ್ ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ಅಭಿನಂದಿಸಿದ್ದಾರೆ.

error: Content is protected !!