ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆ

ಪೂರ್ಣ ಪ್ರಮಾಣದಲ್ಲಿ ಸಂಪುಟ ರಚನೆ - Janathavaniಇಂದು 28 ಸಚಿವರು ಪ್ರಮಾಣ ವಚನ ಸ್ವೀಕಾರದ ಸಾಧ್ಯತೆ

ಸಚಿವರ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯಿಂದ ಎಸ್.ಎಸ್. ಮಲ್ಲಿಕಾರ್ಜುನ್ ಹೆಸರು

ಬೆಂಗಳೂರು, ಮೇ 19 – ವಿಧಾನಸಭಾ ಚುನಾವಣೆ ಗೂ ಮುನ್ನ ಜನತೆಗೆ ನೀಡಿ ರುವ ಗ್ಯಾರಂಟಿ ಯೋಜನೆ ಗಳನ್ನು ಅನು ಷ್ಠಾನಗೊಳಿ ಸುವುದು, ಲೋಕಸಭಾ ಚುನಾವಣೆ ವೇಳೆಗೆ ಸರ್ಕಾರ ಜನಪರವಾಗಿದೆ ಎಂಬು ದನ್ನು ಸಾಬೀತು ಪಡಿಸಲು ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪೂರ್ಣ ಪ್ರಮಾಣದಲ್ಲಿ ಸಂಪುಟ ರಚಿಸುತ್ತಿದ್ದಾರೆ.

ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರ ಸಲಹೆಯಂತೆ ತಾವು ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜಿತರಾಗಿರುವ ಡಿ.ಕೆ.ಶಿವಕುಮಾರ್ ಅವರಲ್ಲದೆ, 28 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

4 ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಉಳಿದಂತೆ ಸಂಪುಟದಲ್ಲಿ ಪ್ರಾದೇಶಿಕತೆ, ಜಾತಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಪ್ರಾತಿನಿಧ್ಯ ಕಲ್ಪಿಸಿ ಸಂಪುಟ ರಚನೆ ಮಾಡಲಾಗುತ್ತಿದೆ.

ಮಂತ್ರಿಮಂಡಲ ರಚನೆಗೆಂದು ದೆಹಲಿಗೆ ಅಲೆಯುವುದು ಬೇಡ. ಅಧಿಕಾರ ವಹಿಸಿಕೊಂಡ ತಕ್ಷಣ ಜನರ ಕೆಲಸ ಮಾಡಿ. ನಿಮಗೆ ಏನು ಮಾರ್ಗ ದರ್ಶನದ ಅವಶ್ಯಕತೆ ಇದೆಯೋ ಅದನ್ನು ಒಮ್ಮೆಲೇ ಪಡೆದುಕೊಂಡು ಹೋಗಿ ಎಂದು ಸಿದ್ಧರಾಮಯ್ಯ ಹಾಗೂ ಶಿವಕುಮಾರ್‌ಗೆ ಕಿವಿಮಾತು ಹೇಳಿದ್ದಾರೆ.

ರಾಹುಲ್ ಸಲಹೆಯಂತೆ ದೆಹಲಿಗೆ
ವಿಶೇಷ ವಿಮಾನದಲ್ಲಿ ತೆರಳಿದ ಉಭಯ ನಾಯಕರು ಇಂದು ಇಡೀ ದಿನ ವರಿಷ್ಠರೊಂದಿಗೆ ಸಮಾಲೋಚಿಸಿ, ಮಂತ್ರಿ ಮಂಡಲ ಸೇರುವ ಶಾಸಕರ ಪಟ್ಟಿಯೊಂದಿಗೆ ಹಿಂದಿರುಗಿದ್ದಾರೆ.

ಶನಿವಾರ ಬೆಳಿಗ್ಗೆ 12;30 ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬಳಿಕ ನೂತನ ಸಚಿವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶನಿವಾರ ಸಿದ್ಧರಾಮಯ್ಯ ಅವರ
ಸಂಪುಟಕ್ಕೆ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ :  ಎಸ್.ಎಸ್.ಮಲ್ಲಿಕಾರ್ಜುನ್ – ದಾವಣಗೆರೆ,  ಡಾ.ಜಿ.ಪರಮೇಶ್ವರ್ – ತುಮಕೂರು, ಬಿ.ಕೆ.ಹರಿಪ್ರಸಾದ್ – ದಕ್ಷಿಣ ಕನ್ನಡ, ಎಂ.ಬಿ.ಪಾಟೀಲ್ – ಬಿಜಾಪುರ, ಕೆ.ಜೆ.ಜಾರ್ಜ್ – ಬೆಂಗಳೂರು, ಕೃಷ್ಣ ಭೈರೇಗೌಡ – ಬೆಂಗಳೂರು, ರಾಮಲಿಂಗಾರೆಡ್ಡಿ – ಬೆಂಗಳೂರು, ಸತೀಶ್ ಜಾರಕಿಹೊಳಿ – ಬೆಳಗಾವಿ, ಲಕ್ಷ್ಮಿ ಹೆಬ್ಬಾಳ್ಕರ್ – ಬೆಳಗಾವಿ, ಲಕ್ಷ್ಮಣ ಸವದಿ – ಬೆಳಗಾವಿ, ಶರಣ ಪ್ರಕಾಶ ಪಾಟೀಲ್ – ಗುಲ್ಬರ್ಗ, ಪ್ರಿಯಾಂಕ್ ಖರ್ಗೆ – ಗುಲ್ಬರ್ಗ, ಬಸವರಾಜ ರಾಯರೆಡ್ಡಿ – ಕೊಪ್ಪಳ, ಕೆ.ಎಂ.ಶಿವಲಿಂಗೇಗೌಡ – ಹಾಸನ, ಪ್ರಿಯಾಕೃಷ್ಣ – ಬೆಂಗಳೂರು

ಮಧುಬಂಗಾರಪ್ಪ – ಶಿವಮೊಗ್ಗ, ವಿಜಯಾನಂದ ಕಾಶಪ್ಪನವರ್ – ಬಾಗಲಕೋಟೆ, ವಿನಯ ಕುಲಕರ್ಣಿ – ಧಾರವಾಡ, ಹೆಚ್.ಸಿ.ಮಹದೇವಪ್ಪ – ಮೈಸೂರು, ಪುಟ್ಟರಂಗಶೆಟ್ಟಿ – ಚಾಮರಾಜನಗರ, ಪೊನ್ನಣ್ಣ – ಕೊಡಗು, ಶಿವರಾಜ ತಂಗಡಗಿ – ಕೊಪ್ಪಳ, ಚಲುವರಾಯಸ್ವಾಮಿ ಇಲ್ಲವೇ ನರೇಂದ್ರಸ್ವಾಮಿ – ಮಂಡ್ಯ, ಅಜಯ್ ಧರ್ಮಸಿಂಗ್ – ಯಾದಗಿರಿ, ರೂಪಕಲಾ ಶಶಿಧರ್ ಇಲ್ಲವೇ ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್,ಆರ್.ವಿ.ದೇಶಪಾಂಡೆ ಹಾಗೂ ಟಿ.ಬಿ.ಜಯಚಂದ್ರ ಅವರ ಪೈಕಿ ಒಬ್ಬರು ವಿಧಾನಸಭೆಯ ಅಧ್ಯಕ್ಷರಾಗುವುದು ಬಹುತೇಕ ಖಚಿತ.

ಜಮೀರ್ ಅಹ್ಮದ್ ಖಾನ್,ಎನ್.ಎ.ಹ್ಯಾರೀಸ್,ಯು.ಟಿ.ಖಾದರ್ ಮತ್ತು ಸಲೀಂ ಅಹ್ಮದ್ ಅವರ ಪೈಕಿ ಮೂರು ಮಂದಿಗೆ ಸಂಪುಟದಲ್ಲಿ ಅವಕಾಶ ದೊರೆಯಲಿದೆ.

error: Content is protected !!