ಸಾಣೇಹಳ್ಳಿಯ ಪ್ರೌಢಶಾಲೆಗೆ ಶೇ. 98.03 ಫಲಿತಾಂಶ

ಸಾಣೇಹಳ್ಳಿ, ಮೇ 10-  ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಗುರುಪಾದೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ 51 ವಿದ್ಯಾರ್ಥಿಗಳು ಕುಳಿತುಕೊಂಡಿದ್ದು, ಶೇ. 98.03 ರಷ್ಟು ಫಲಿತಾಂಶ ಬಂದಿದೆ.   ಶಾಲೆಗೆ 606 ಅಂಕ ಗಳಿಸಿದ ರಚನಾ ಎ. ಎಸ್. ಪ್ರಥಮ, 584 ಅಂಕ ಗಳಿಸಿದ ತನುಜ ಎಂ ಯು.  ದ್ವಿತೀಯ ಹಾಗೂ 577 ಅಂಕ ಗಳಿಸಿರುವು ಪವನ್ ಎನ್.  ತೃತೀಯ ಸ್ಥಾನ ಪಡೆದಿದ್ದಾರೆ. 

ಶ್ರೀ ಗುರುಪಾದೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಗೆ  ಶೇ. 94.4 ರಷ್ಟು ಫಲಿತಾಂಶ ಬಂದಿದೆ.  ಶಾಲೆಗೆ 585 ಅಂಕ ಗಳಿಸಿದ ನಿಂಗಣ್ಣ ಪ್ರಥಮ, 568 ಅಂಕ ಗಳಿಸಿದ ನಂದಿನಿ ಬಿ. ದ್ವಿತೀಯ, 536 ಅಂಕ ಗಳಿಸಿದ ಸಂಜಯ್ ಎಸ್.ಬಿ. ತೃತೀಯ ಸ್ಥಾನ ಪಡೆದಿದ್ದಾರೆ. 

ಹಿಂದಿ ವಿಷಯದಲ್ಲಿ  ರಚನಾ ಎ. ಎಸ್., ನಿಂಗಣ್ಣ, ನಂದಿನಿ .ಬಿ.  ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. 

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ,  ಇಲ್ಲಿನ ಶಿಕ್ಷಕರ ನಿರಂತರ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬರುವಂತಾಗಿದೆ. ಶ್ರಮವಹಿಸಿದ ವಿದ್ಯಾರ್ಥಿಗಳು ಮತ್ತು ನೌಕರರು ಅಭಿನಂದನಾರ್ಹರು  ಎಂದಿದ್ದಾರೆ.

error: Content is protected !!