ಸರ್.ಎಂ.ವಿ. ಕಾಲೇಜು ಉತ್ತಮ ಸಾಧನೆ

ದಾವಣಗೆರೆ, ಏ. 21- 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸರ್.ಎಂ.ವಿ. ಗ್ರೂಪ್ ಆಪ್‌ ಇನ್‌ಸ್ಟಿಟ್ಯೂಷನ್  ಉತ್ತಮ ಸಾಧನೆ ಮಾಡಿದೆ.

ವಾಣಿಜ್ಯ ವಿಭಾಗದಲ್ಲಿ ಸರ್.ಎಂ.ವಿ. ಪಿಯು ಕಾಲೇಜು ಶೇ.100ರಷ್ಠು ಫಲಿತಾಂಶ ಪಡೆದಿದೆ. ಕು.ಪ್ರೀತಿ ಯು. 600ಕ್ಕೆ 590 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ಕುಮಾರಿ ವಿನುತ ಎನ್. ಹತ್ತಿಕಾಳ 600ಕ್ಕೆ 585 ಅಂಕ ಗಳಿಸಿ, ಉತ್ತಮ ಫಲಿತಾಂಶ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಾಗರ್ ಹೆಚ್.ಪಿ. 589 ಅಂಕ ಗಳಿಸಿದರೆ, ಮನೋಜ್ ಹೆಚ್.ಪಿ. ಹಾಗೂ ಎಸ್. ಅಕ್ಷಯ 588 ಅಂಕಗಳನ್ನು ಗಳಿಸಿದ್ದಾರೆ.

ಒಟ್ಟಾರೆ ಸರ್.ಎಂ.ವಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ 886 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣೆಯಲ್ಲಿ ತೇರ್ಗಡೆ ಹೊಂದಿದ್ದು, ಶೇ.99.13ರಷ್ಟು ಫಲಿತಾಂಶ ಲಭಿಸಿದೆ.

ಗಣಿತ ಶಾಸ್ತ್ರ 48, ಜೀವಶಾಸ್ತ್ರ 40, ಗಣಕ ವಿಜ್ಞಾನ 38, ಕನ್ನಡ 12, ಲೆಕ್ಕ ಶಾಸ್ತ್ರ 12, ಸಂಖ್ಯಾಶಾಸ್ತ್ರ 10, ಭೌತಶಾಸ್ತ್ರ 8, ಸಂಸ್ಕೃತ 6, ರಸಾಯನಶಾಸ್ತ್ರ 1, ವ್ಯವಹಾರ ಅಧ್ಯಯನ 1 ಈ ವಿದ್ಯಾರ್ಥಿಗಳು ಶೇ.100 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಾಗರ್ ಹೆಚ್.ಪಿ. 589, ಮನೋಜ್ ಕೆ.ಪಿ. 588, ಅಕ್ಷಯ್ ಎಸ್. 588, ಪ್ರತೀಕ್ ಕೆಂಚನಗೌಡರ 587, ರೇಕುಲಕುಂಟೆ ಸಾಯಿ ಸೂರ್ಯ ಗಣೇಶ್ 585, ಸಹನ ಪಿ.ಜೆ. 585, ರುತಿಕಾ ಎಸ್. 585, ಎಸ್.ಎಸ್. ಭೂಮಿಕ 585 ಅಂಕ ಪಡೆದು ಉತ್ತ ಸಾಧನೆ ಮಾಡಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಪ್ರೀತಿ ಯು 590 ಹಾಗೂ ವಿನುತ ಹತ್ತಿಕಾಳ 585 ಅಂಕ ಪಡೆದಿದ್ದಾರೆ.

error: Content is protected !!