ದಾವಣಗೆರೆ, ಏ. 21- ನಗರದ ದಿ ಟೀಮ್ ಅಕಾಡೆಮಿ (ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು) ಗೆ ಈ ಬಾರಿ ಕಾಲೇಜಿನ ಒಟ್ಟಾರೆ ಫಲಿತಾಂಶದಲ್ಲಿ 99.7% ಪಡೆದಿರುತ್ತಾರೆ.
ಕಾಲೇಜಿನಿಂದ ಒಟ್ಟು 289 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 288 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕಾಲೇಜಿಗೆ ಶೇ. 99.7 ಒಟ್ಟು ಫಲಿತಾಂಶ ತಂದಿರುತ್ತಾರೆ.
ಸಿ.ಕೆ. ವರ್ಷನ್ ಕುಮಾರ್ 600 ಕ್ಕೆ 574 ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾನೆ. 167 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 121 ವಿದ್ಯಾರ್ಥಿಗಳು ಪ್ರಥಮ ದರ್ಜೆ, 03 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕನ್ನಡ ಭಾಷಾ ವಿಷಯದಲ್ಲಿ 5, ಭೌತಶಾಸ್ತ್ರ ವಿಷಯದಲ್ಲಿ 4, ಗಣಿತ ವಿಷಯದಲ್ಲಿ 11, ಗಣಕ ವಿಜ್ಞಾನ ವಿಷಯದಲ್ಲಿ 4 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.