ಹರಿಹರ: 13 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆ

ಹರಿಹರ: 13 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆ - Janathavaniಹರಿಹರ, ಏ.20- ಮೇ 10 ರಂದು ನಡೆಯುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹರಿಹರ ಕ್ಷೇತ್ರದಿಂದ ಸ್ಪರ್ಧಿ ಸಲು 13 ಅಭ್ಯರ್ಥಿಗಳಿಂದ 21 ನಾಮಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಉದಯ್ ಕುಮಾರ್ ಕುಂಬಾರ ತಿಳಿಸಿದರು.

ಅಭ್ಯರ್ಥಿಗಳ ಮಾಹಿತಿಯನ್ನು ನೀಡಿದ ಅವರು, ಜೆಡಿಎಸ್ ಪಕ್ಷದ ಹೆಚ್.ಎಸ್. ಶಿವಶಂಕರ್ 4, ಬಿಜೆಪಿ  ಬಿ.ಪಿ. ಹರೀಶ್ 4,  ಕಾಂಗ್ರೆಸ್‌ನ ನಂದಿಗಾವಿ ಶ್ರೀನಿವಾಸ್  2 , ಆಮ್ ಆದ್ಮಿ ಪಕ್ಷದ ಗಣೇಶ ದುರ್ಗದ  2 ಮತ್ತು ಬಸವರಾಜ್ 1, ಉತ್ತಮ ಪ್ರಜಾಕೀಯ ಪಕ್ಷದಿಂದ ಕೃಷ್ಣ ಎಂ.,  ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಕೇತ್ ಎಸ್.,  ಬಹುಜನ ಸಮಾಜ ಪಾರ್ಟಿಯ   ಡಿ. ಹನುಮಂತಪ್ಪ,    ಪಕ್ಷೇತರರಾಗಿ ಪರಶುರಾಮ್ ಎಂ.,  ಕರಿಬಸವಯ್ಯ ಮಠದ್ ವಿ., ಜೈಕುಮಾರ್ ಟಿ.ಹೆಚ್., ಬಿ.ಎಸ್. ಉಜ್ಜಿನಪ್ಪ, ಮೂರ್ತಿ ಹೆಚ್. ಎಸ್., ಸೇರಿದಂತೆ  ಒಟ್ಟು 13 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಚುನಾವಣೆ ಸಿಬ್ಬಂದಿಗಳು ಹಾಜರಿದ್ದರು. 

error: Content is protected !!