ದಾವಣಗೆರೆ, ಏ. 21- ನಗರದ ತರಳಬಾಳು ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100ಕ್ಕೆ 100 ಫಲಿತಾಂಶ ಬಂದಿರುತ್ತದೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರಾಂಗಿಣಿ ಗಲಗಲಿ 600 ಅಂಕಗಳಿಗೆ 587 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಪಲ್ಲವಿ ವಿ. 600 ಅಂಕಗಳಿಗೆ 578 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. 143 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 185 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ – 3, ಸಂಸ್ಕೃತ -1, ಭೌತಶಾಸ್ತ್ರ – 1, ರಸಾಯನಶಾಸ್ತ್ರ –1, ಗಣಿತ ಶಾಸ್ತ್ರದಲ್ಲಿ-4, ಜೀವಶಾಸ್ತ್ರದಲ್ಲಿ – 1, ಗಣಕ ವಿಜ್ಞಾನ -3 ಹಾಗೂ ವಾಣಿಜ್ಯ ವಿಭಾಗದಲ್ಲಿ ಲೆಕ್ಕಶಾಸ್ತ್ರ -2, ಸಂಖ್ಯಾಶಾಸ್ತ್ರ – 1 ವಿದ್ಯಾರ್ಥಿಗಳು, 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.