ವಚನಕಾರ ಶ್ರೀ ದೇವರದಾಸಿಮಯ್ಯ ಜಯಂತಿ ಆಚರಣೆ

ವಚನಕಾರ ಶ್ರೀ ದೇವರದಾಸಿಮಯ್ಯ ಜಯಂತಿ ಆಚರಣೆ

ರಾಣೇಬೆನ್ನೂರು, ಮಾ. 28- ನೇಕಾರ ಸಮಾಜದವರು ಒಗ್ಗಾಟ್ಟಾಗಿದ್ದರೆ ಸರಕಾರ ದಿಂದ ಅನೇಕ ಯೋಜನೆಗಳ ಸೌಲಭ್ಯ ಪಡೆ ಯಲು ಸಾಧ್ಯ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಸವರಾಜ ಕೇಲಗಾರ ಹೇಳಿದರು.

ಮಂಗಳವಾರ ಸಿದ್ದೇಶ್ವರ ನಗರದ ನೀಲಕಂಠೇಶ್ವರ ದೇವ ಸ್ಥಾನದಲ್ಲಿ ಹಾವೇರಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ನೇಕಾರ ಸಂತ, ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ  ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೇಕಾರರಿಗೆ ಬಿ.ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ ಮಾತಿನಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದರು.

ನೇಕಾರ ನಿಗಮ, ಬ್ಯಾಂಕಿನಲ್ಲಿ ಸಾಲ-ಸೌಲಭ್ಯ, ಮಾಸಾಶನ, ಜವಳಿ ಪಾರ್ಕ್‌ ಹಾಗೂ ಹಲವಾರು ನಿಗಮಗಳಲ್ಲಿ ಸಮುದಾಯದವರನ್ನು ನಾಮ ನಿರ್ದೇಶಕ ಸದಸ್ಯರನ್ನಾಗಿ ಮಾಡಿ ರಾಜಕೀಯದಲ್ಲಿ ಸ್ಥಾನಮಾನ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ನೇಕಾರರಿಗೆ ಟಿಕೆಟ್ ನೀಡಲು ಮುಂದಾಗಿದ್ದು, ನೇಕಾರರು ಈ ಬಾರಿಯ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮತ ಹಾಕಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.

ನಗರ ಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮಾತನಾಡಿ, ನೇಕಾರರು ಒಗ್ಗಟ್ಟಾಗುವ ಜೊತೆಗೆ, ನೇಕಾರ ಸಮು ದಾಯದ ಒಳಪಂಗಡಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳೆಯಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಈ ವೇಳೆ ಸಮಾಜದ ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ, ಹನುಮಂತಪ್ಪ ಮುಕ್ತೇನಹಳ್ಳಿ, ಕರಿಬಸಪ್ಪ ನೀಲಗುಂದ, ನಾಗರಾಜ ಅಗಡಿ, ಶಿವಾನಂದ ಬಗಾದಿ, ಬಾಬು ರೋಖಡೆ, ಶಾರದಾ ಆನ್ವೇರಿ, ಹನುಮಂತಪ್ಪ ಅಮಾಸಿ, ಬಸವರಾಜ ಲಕ್ಷ್ಮೇಶ್ವರ, ಹನುಮಂತಪ್ಪ ಕಾಕಿ, ಸಂಕಪ್ಪ ಮಾರನಾಳ, ಅಶೋಕ ದುರ್ಗದಸೀಮೆ, ತಿಮ್ಮಣ್ಣ ಅಮಾಸಿ, ಶಂಕ್ರಣ್ಣ ಗರಡಿಮನಿ, ಲಕ್ಷ್ಮಣ ಕಡ್ಲಿಬಾಳ, ಎಲ್ಲಪ್ಪ ಗುತ್ತಲ ಮತ್ತಿತರರಿದ್ದರು.

error: Content is protected !!