ಹರಪನಹಳ್ಳಿ, ಮಾ.10- ಮಗಳನ್ನು ದೇವದಾಸಿ ಪದ್ಧತಿಗೆ ತಳ್ಳುವ ಯತ್ನ ನಡೆದಿದೆ ಎಂಬ ವಿಚಾರ ತಿಳಿದು ದೇವದಾಸಿ ಮಹಿಳಾ ವಿಮೋಚನಾ ಸಂಘ, ದೇವದಾಸಿ ಪುನರ್ವಸತಿ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ತಾಲೂಕಿನ ಆಲದಹಳ್ಳಿ ಗ್ರಾಮಕ್ಕೆ ತೆರಳಿ ಪೋಷಕರಿಗೆ ಅರಿವು ಮೂಡಿಸಿದ ಘಟನೆ ಜರುಗಿದೆ.
ಆಲದಹಳ್ಳಿ ಗ್ರಾಮದ ಕಾಡಜ್ಜಿ ಪರಸಪ್ಪ ಹಾಗೂ ನಾಗಮ್ಮ ದಂಪತಿ ಮಗಳಿಗೆ ಮುತ್ತು ಕಟ್ಟಿಸಲು ಮುಂದಾಗಿರುವ ವಿಷಯ ತಿಳಿದು ಬಂದ ಹಿನ್ನೆಲೆಯಲ್ಲೆ ದೇವದಾಸಿ ಮಹಿಳಾ ವಿಮೋಚನಾ ಸಂಘದ ಟಿ.ವಿ.ರೇಣುಕಮ್ಮ, ದೇವದಾಸಿ ಪುನ ರ್ವಸತಿ ಕೇಂದ್ರದ ಹರಪನ ಹಳ್ಳಿ ತಾಲ್ಲೂಕು ಅಧಿಕಾರಿ ಪ್ರಜ್ಞಾ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸೂಪರ ವೈಸರ್ ಹೇಮಾ ಹಾಗೂ ಚಿಗಟೇರಿ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿ ದೇವದಾಸಿ ಬಿಡು ವುದು ಅಪರಾಧ. ಹಾಗೆ ಮಾಡ ಬಾರದು ಎಂದು ತಂದೆ-ತಾಯಿ ಯವರಿಗೆ ಬುದ್ದಿ ಹೇಳಿದ್ದಾರೆ.
ಈ ಕುರಿತು ರೇಣುಕಮ್ಮ ಅವರು ಹೇಳಿಕೆ ನೀಡಿದ್ದು, ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇವೆ, ಆ ಹೆಣ್ಣು ಮಗಳಿಗೆ ಅಂತಹ ಅನಿಷ್ಟ ಪದ್ದತಿಗೆ ಹೋಗುವ
ಮನಸ್ಸಿಲ್ಲ, ಆದರೆ ತಂದೆ-ತಾಯಿಯ ಒತ್ತಡವಿದೆ ಎಂದು ಹೇಳಿದರು.
ಆ ಸಂತ್ರಸ್ಥ ಹೆಣ್ಣು ಮಗಳಿಗೂ ಧೈರ್ಯ ತುಂಬಿ ಸಮಸ್ಯೆಯಾದರೆ ಕರೆ ಮಾಡಲು ನಮ್ಮ ದೂರವಾಣಿ ಸಂಖ್ಯೆ ನೀಡಿ ಬಂದಿದ್ದೇವೆ ಎಂದು ಹೇಳಿದರು.