ಪಪಂ ಮರು ಹರಾಜು : ಏರಿಕೆಯಾಗದ ಆದಾಯ

ಪಪಂ ಮರು ಹರಾಜು : ಏರಿಕೆಯಾಗದ ಆದಾಯ

ಜಗಳೂರು, ಮಾ.10-ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ಬಾರಿಗೆ ಬಹಿರಂಗ ಮರು ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಅನೇಕ ಬಿಡ್ ದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಗೂಡಂಗಡಿ ನೆಲಬಾಡಿಗೆ ತರಕಾರಿ ಮಾರುಕಟ್ಟೆ ಸುಂಕ ವಸೂಲಿ- 870000 ಎಚ್.ಉಮೇಶ್, ಖಾಸಗಿ ಬಸ್ ನಿಲ್ದಾಣ ಸುಂಕ ವಸೂಲಿ-140000 ಮಧುಸೂದನ್, ಕೋಳಿ, ಕಸಾಯಿಖಾನೆ, ಮೀನು ಮಾರಾಟ ಸುಂಕ ವಸೂಲಿ 85000 ಎಂ ಪ್ರಕಾಶ್ ಅವರಿಗೆ ಹರಾಜು ಆದವು.

ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಕಳೆದ ವರ್ಷಕಿಂತ ಕಡಿಮೆ ಆದಾಯ ಬಂದಿದೆ.   ಹರಾಜು ಮೊತ್ತದ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು‌. ಅನುಮೋದನೆ ನೀಡಿದ ನಂತರ ಸುಂಕ ವಸೂಲಿ ಪ್ರಕ್ರಿಯೆ ಆರಂಭಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಸದಸ್ಯರಾದ ರಮೇಶ್ ರೆಡ್ಡಿ , ಶಕೀಲ್ ಅಹಮ್ಮದ್, ಆರ್.ತಿಪ್ಪೇಸ್ವಾಮಿ, ಓಬಳೇಶ್, ಮುಖಂಡರಾದ ಓಬಳೇಶ್, ಶಿವಣ್ಣ, ರಮೇಶ್, ಕಂದಾಯ ನಿರೀಕ್ಷಕ ಮೋಹಿದ್ದೀನ್ ಸೇರಿದಂತೆ ಭಾಗವಹಿಸಿದ್ದರು.

6.97 ಲಕ್ಷ ರೂ ಆದಾಯ ಕೊರತೆ;- ಹಿಂದಿನ ವರ್ಷ17.92 ಲಕ್ಷ ರೂ  ಆದಾಯ ಬಂದಿತ್ತು. ಮೂರೂ ಬಾಬುಗಳು ಸೇರಿ ಈ ವರ್ಷ 10.95ಲಕ್ಷ ರೂ.ಗೆ ಹರಾಜು ನಿಂತಿದೆ. ಅಂದರೆ 6.97ಲಕ್ಷರೂ ಆದಾಯ ಕಡಿಮೆಯಾಗುತ್ತದೆ.

ಹರಾಜು ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುತ್ತಾರೋ  ಆದಾಯ ಕಡಿಮೆ ಯಾಗಿರುವುದರಿಂದ ಮರು ಹರಾಜಿಗೆ ಆದೇಶಿಸುತ್ತಾರೋ?ಕಾದು ನೋಡಬೇಕಿದೆ.

error: Content is protected !!