ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ

ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ

ಮಲೇಬೆನ್ನೂರು, ಮಾ. 8 – ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಮುಖ್ಯ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಯುವಕರು ಪರಸ್ಪರ ಬಣ್ಣ ಎರಚಿ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. 

ನಂತರ ಬಣ್ಣದ ನೀರಿನಿಂದ ಕೂಡಿದ್ದ ಮಡಿಕೆ ಒಡೆದು ಸಂಭ್ರಮಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ಡಿ. ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಪುರಸಭೆ ಸದಸ್ಯರಾದ ಬೆಣ್ಣೆ ಹಳ್ಳಿ ಸಿದ್ದೇಶ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಹಿಂದೂ ಮಹಾಗಣಪತಿಯ ವೈ. ಚಂದ್ರಶೇಖರ್, ಸಾಮೂಹಿಕ ಹೋಳಿಯ ಸಂಘಟಕರಾದ ಶ್ರೀನಿವಾಸ್, ಆಕಾಶ್, ಕಿರಣ್ ಸಂಜು, ಸುನೀಲ್, ಪಿಂಟು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು. 

ಪಿ.ಎಸ್.ಐ. ಪ್ರಭು ಕೆಳಗಿನ ಮನೆ ಅವರ ನೇತೃತ್ವದಲ್ಲಿ ಬಂದೋಬಸ್ತ್ ಕೈಗೋಳ್ಳಲಾಗಿತ್ತು. 

ಮನೆಗಳಲ್ಲಿ ಹೋಳಿ :– ಪಟ್ಟಣದ ಅನೇಕ ಕಡೆಗಳಲ್ಲಿ ಆಯಾ ಬಡಾವಣೆಯ ಜನರು ಸೇರಿ ಹೋಳಿ ಹಬ್ಬ ಆಚರಿಸಿದರೆ, ಇನ್ನೂ ಕೆಲವರು ಮನೆಯಲ್ಲೇ ಎಲ್ಲರೂ ಸೇರಿ ಪರಸ್ಪರ ಬಣ್ಣ ಹಚ್ಚಿ ಖುಷಿ ಪಟ್ಟರು.

error: Content is protected !!