ಹಿರಿಯ ಸಾಹಿತಿ ಎನ್.ಟಿ. ಎರಿಸ್ವಾಮಿ ಅವರ `ನಮ್ಮೂರ ಪ್ರಪಂಚ’ ಪುಸ್ತಕ ಬಿಡುಗಡೆ

ಹಿರಿಯ ಸಾಹಿತಿ ಎನ್.ಟಿ. ಎರಿಸ್ವಾಮಿ ಅವರ `ನಮ್ಮೂರ ಪ್ರಪಂಚ’ ಪುಸ್ತಕ ಬಿಡುಗಡೆ

ಜಗಳೂರು, ಫೆ.20 – ನಿವೃತ್ತ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ಎರಿಸ್ವಾಮಿಯವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಎಸ್. ವಿ. ರಾಮಚಂದ್ರ  ಹೇಳಿದರು.

ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಜಾಗರಣೆ ಹಾಗೂ ಎನ್.ಟಿ. ಎರಿಸ್ವಾಮಿಯವರ `ನಮ್ಮೂರ ಪ್ರಪಂಚ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡುತ್ತೇನೆ. ಮುಂದಿನ ತಿಂಗಳು ಇನ್ನೂ 15  ದಿನಗಳಲ್ಲಿ  ಭದ್ರಾ ಮೆಲ್ದಂಡೆ ನೀರಾವರಿ ಯೋಜನೆಗೆ ಭೂಮಿ ಪೂಜೆ ಮಾಡಲಾಗುವುದು. ಈ ಯೋಜನೆಯಿಂದ ತೊರೆ ಸಾಲುಭಾಗದ ಗ್ರಾಮಗಳಿಗೆ  ಹೆಚ್ಚು  ಅನುಕೂಲವಾಗಲಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ ಮಾಡಿರುವ ಕೆಲಸವನ್ನು ಜನತೆಗೆ ತಿಳಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ,  ಸಾಹಿತ್ಯ ಕ್ಷೇತ್ರವು  ಎಲ್ಲರನ್ನು ಒಂದುಗೂಡಿಸುವಂತ ಕೆಲಸವನ್ನು  ಮಾಡುತ್ತದೆ. ಇಲ್ಲಿ ಯಾವುದೇ ಜಾತಿ ಮತ ಧರ್ಮದ ಬೇಧಭಾವ ವಿಲ್ಲದೇ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುತ್ತಿದೆ ಎಂದರು.

ನಿವೃತ್ತ ಪ್ರಾಚಾರ್ಯ ಪ್ರಭಾಕರ್ ಲಕ್ಕೋಳ್ ಮಾತನಾಡಿ, ಎನ್.ಟಿ. ಎರಿಸ್ವಾಮಿಯವರು ಬ್ಯಾಂಕ್ ನೌಕರರಾದರೂ ಸಹ  ಸಾಹಿತ್ಯದ ಕಡೆ ತಮ್ಮನ್ನು ತೊಡಗಿಸಿಕೊಂಡು ಇಂದು 30 ಕ್ಕೂ ಅಧಿಕ ಪುಸ್ತಕಗಳನ್ನು ಹೊರತಂದಿದ್ದಾರೆ. ಇವರ ಕೃತಿಯಲ್ಲಿ ಸಂಸಾರದ ಜಂಜಾಟದ ಬಗ್ಗೆ ಬರೆದಿದ್ದಾರೆ ಎಂದರು.

ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ  ತಾಲ್ಲೂಕಿಗೆ ಬರಲು ಇನ್ನೂ 5 ವರ್ಷ ಬೇಕಾಗುತ್ತದೆ. ಒಂದು ವರ್ಷದಲ್ಲಿ ಯಾರು ನೀರು ತರುತ್ತಾರೋ ಅವರನ್ನು ಹೆಗಲ ಮೇಲೆ ಕುರಿಸಿಕೊಂಡು  ಮೆರವಣಿಗೆ ಮಾಡುತ್ತೇನೆ ಎಂದರು .

ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ,  ಹಂಪಿಯ  ವಿರುಪಾಪುರಗಡ್ಡೆ, ಬಿ. ಶಿವರಾಮರೆಡ್ಡಿ,  ನಿವೃತ್ತ ಪ್ರಾಚಾರ್ಯರಾದ ಎಂ. ಬಸಪ್ಪ,  ನಿವೃತ್ತ ಲೋಕಾಯುಕ್ತ ಉಪ ಪೋಲಿಸ್ ವರಿಷ್ಠಾಧಿಕಾರಿ ಬಿ. ಕಲ್ಲೇಶಪ್ಪ,  ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ,  ಕೆಪಿಸಿಸಿಯ ಎಸ್ಟಿ ಘಟಕದ ರಾಜ್ಯಾಧ್ಯಾಕ್ಷ ಕೆ.ಪಿ. ಪಾಲಯ್ಯ, ನಿವೃತ್ತ ಉಪನ್ಯಾಸಕ ಸುಭಾಷ್ ಚಂದ್ರ ಬೋಸ್ ಮಾತನಾಡಿದರು,

ಈ ಸಂಧರ್ಭದಲ್ಲಿ  ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಚಿದಾನಂದ, ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಉಜ್ಜಿನಪ್ಪ, ಅಖಿಲ ಭಾರತ  ಶರಣ ಸಾಹಿತ್ಯ ಪರಿಷತ್ತನ ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ, ಗೀತಾಂಜಲಿಪ್ರಕಾಶನದ ಮೋಹನ್, ಕೂಡ್ಲಿಗಿ ತಾಲ್ಲೂಕಿನ  ಕನ್ನಡ ಸಾಹಿತ್ಯ ಸಮ್ಮೇಳನದ ನಿಯೊಜಿತ ಅಧ್ಯಕ್ಷ ರವಿಕುಮಾರ್, ಸಾಹಿತಿ ಎನ್.ಟಿ. ಎರ್ರಿಸ್ವಾಮಿ,  ಗ್ರಾಮದ ಮುಖಂಡರಾದ ಪ್ರಹ್ಲಾದ ರೆಡ್ಡಿ, ಮನೋಹರ್ ರೆಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!