ದೇಶದ ಮಕ್ಕಳೇ ನಿಜವಾದ ಆಸ್ತಿ ಆಗಬೇಕು

ದೇಶದ ಮಕ್ಕಳೇ ನಿಜವಾದ ಆಸ್ತಿ ಆಗಬೇಕು

ಶ್ರೀ ಸೋಮೇಶ್ವರ ಶಾಲಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕ ಸು.ರಾಮಣ್ಣ

ದಾವಣಗೆರೆ, ಮಾ.18- ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೇ, ಮಕ್ಕಳನ್ನೇ  ನಿಜವಾದ ಆಸ್ತಿಯನ್ನಾಗಿ ಮಾಡಬೇಕೆಂದು ಆರ್‌ಎಸ್‌ಎಸ್‌ ಪ್ರಚಾರಕ  ಸು.ರಾಮಣ್ಣ  ಕರೆ ನೀಡಿದರು.

ನಗರದ  ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ `ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. 

ಪಠ್ಯದ ಜೊತೆ ಮಕ್ಕಳಲ್ಲಿ ದೇಶ ಪ್ರೇಮ ಹಾಗೂ ರಾಷ್ಟ್ರ ಭಕ್ತಿಯನ್ನು ಉಣಬಡಿಸಬೇಕು.  ಭಾವೀ ಪ್ರಜೆಗಳನ್ನು ನಿರ್ಮಿಸುವ ಶಿಲ್ಪಿಗಳಾದ ಶಿಕ್ಷಕರಿಗೂ   ಮಾನವೀಯ ಮೌಲ್ಯಗಳು ಬೇಕು ಎಂದು ತಿಳಿಸಿದರು. 

ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವಲ್ಲಿ ಹಾಗೂ ಮೌಲ್ಯಗಳನ್ನು ಕಲಿಸುವಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು    ಬಣ್ಣಿಸಿದರು.  

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ  ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ  ಎಸ್.ಎ. ರವೀಂದ್ರನಾಥ್‌  ನೆರವೇರಿಸಿದರು. 

ಈ ಸಂದರ್ಭದಲ್ಲಿ ಶಾಲೆಯ ಗೌರವ ಕಾರ್ಯದರ್ಶಿಯೂ ಆಗಿರುವ ದೂಡಾ ಮಾಜಿ ಅಧ್ಯಕ್ಷ  ಕೆ.ಎಂ ಸುರೇಶ್‌, ಶೈಕ್ಷಣಿಕ ನಿರ್ದೇಶಕ ಪರಮೇಶ್ವರಪ್ಪ,  ಪ್ರಾಂಶುಪಾಲರಾದ ಪ್ರಭಾವತಿ ಎನ್‌, ವೀಣಾ ಪಿ. ಹೆಚ್‌, ಆಡಳಿತಾಧಿಕಾರಿ ಹರೀಶ್‌ ಬಾಬು ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!