ನಾಟಕ, ಸಿನಿಮಾಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ

ನಾಟಕ, ಸಿನಿಮಾಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ

ವ.ಬಸಾಪುರ : ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಚಂದ್ರಶೇಖರ ಪೂಜಾರ್ ಅಭಿಮತ

ಮಲೇಬೆನ್ನೂರು, ಮಾ.18- ನಾಟಕ, ಸಿನಿಮಾಗಳು ಮನರಂಜನೆಗಾಗಿ ಇದ್ದರೂ ಅವುಗಳಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇದ್ದೇ ಇರುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅಭಿಪ್ರಾಯಪಟ್ಟರು.

ವಡೆಯರ ಬಸಾಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ರಥೋತ್ಸವದ ಅಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬಿ.ವಿ.ಈಶ ವಿರಚಿತ `ಆಶಾ-ಲತಾ’ ಎಂಬ ಸಾಮಾಜಿಕ ನಾಟಕ ಪ್ರದರ್ಶನದ ಉದ್ಘಾ ಟನಾ ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಒತ್ತಡ ಮುಕ್ತ ಜೀವನಕ್ಕಾಗಿ ಹಳ್ಳಿಗಾಡಿನ ಜನರು ಈ ಹಿಂದಿನಿಂದಲೂ ನಾಟಕ, ಜಾನ ಪದ ಹಾಡು, ಭಜನೆ ಸೇರಿದಂತೆ ಇತ್ಯಾದಿ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತಿ ದ್ದರು. ಇತ್ತೀಚೆಗೆ ಹಳ್ಳಿಗಳಲ್ಲಿ ಅಂತಹ ಮನರಂ ಜನೆ ಕಾರ್ಯಕ್ರಮಗಳು ಕಣ್ಮರೆಯಾಗಿದ್ದು, ಯುವಕರು ಮೊಬೈಲ್ ಮತ್ತು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಸಾಪುರದ ಯುವಕರು 23 ವರ್ಷಗಳ ಬಳಿಕ ಗ್ರಾಮದಲ್ಲಿ ನಾಟಕ ಪ್ರದರ್ಶನ ಸಂಘಟಿಸಿರುವುದು ಮಾದರಿಯಾಗಿದೆ ಎಂದು   ಪೂಜಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಶಕ್ತಿ ದೌರ್ಬಲ್ಯಗಳಿಗೆ ಬಲಿಯಾಗದೇ ಭೂಮಿಗೆ, ತಂದೆ-ತಾಯಿಗಳಿಗೆ ಹೆಮ್ಮೆಯ ಮಕ್ಕಳಾಗಿ ಬದುಕಬೇಕು. ಹಳ್ಳಿಗಳಲ್ಲಿ ರಂಗಭೂಮಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ – ಬೆಳೆಸುವ ಕೆಲಸವನ್ನು ಮಾಡೋಣ ಎಂದು ಚಂದ್ರಶೇಖರ್   ಮನವಿ ಮಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ಸಮಾಜಕ್ಕೆ ಸಂದೇಶ ನೀಡಲು ನಾಟಕಗಳನ್ನು ಹುಟ್ಟಿಹಾಕಿದ್ದರೆಂಬ ಮಾಹಿತಿ ಇದೆ. ಮನುಷ್ಯನಿಗೆ ನಾಟಕ ಕಲೆ ಒಳ್ಳೆಯ ಅಭಿರುಚಿ ತಂದು ಕೊಡುತ್ತದೆ. ಈ ನಿಟ್ಟಿನಲ್ಲಿ ಯುವಕರು ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ  ಬಿ.ಚಿದಾನಂದಪ್ಪ,  ಜಿಗಳಿ ಇಂದೂಧರ್, ಗೋವಿನಹಾಳ್ ರಾಜಣ್ಣ, ಐರಣಿ ಅಣ್ಣಪ್ಪ, ನಂದಿತಾವರೆ ತಿಮ್ಮನಗೌಡ ಮಾತನಾಡಿದರು.

ಗ್ರಾಮದ ಹಿರಿಯರಾದ ಎಂ.ಕರಿಬಸಯ್ಯ, ಹೆಚ್.ಎಂ.ಮಹಾಂತಯ್ಯ, ಎಂ.ಬಿ.ಸೋಮಶೇಖರಯ್ಯ, ವರ್ತಕ ಹೆಚ್.ಎಸ್.ವೀರಭದ್ರಯ್ಯ, ಬಿ.ಆರ್.ಮಲ್ಲಯ್ಯ, ಬಿ.ವಿ.ಲೋಕಯ್ಯ, ಸಿ.ಎಂ.ಗದ್ಗಿಗೆಯ್ಯ, ಮಠದ ಮಂಜಯ್ಯ, ಕಿರಿಗೇರಿ ವೀರಭದ್ರಪ್ಪ, ಹೆಚ್.ಬಿ.ದೊರೆಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯ ವೀರಭದ್ರಯ್ಯ, ಹೆಚ್.ಕೆ.ಶಿವಮೂರ್ತೆಯ್ಯ, ಎಂ.ಕೆ.ಚನ್ನಬಸಯ್ಯ, ಸಿ.ಕೆ.ರುದ್ರಯ್ಯ, ಗಾಳಿಸಿದ್ದಯ್ಯ, ಗ್ರಾ.ಪಂ. ಮಾಜಿ ಸದಸ್ಯ ಪಿ.ಬಸಪ್ಪ, ಗ್ರಾ.ಪಂ. ಸದಸ್ಯ ಎ.ಕೆ.ಹನುಮಂತಪ್ಪ, ಭೋವಿ ರಂಗಪ್ಪ ಮತ್ತಿತರರು ಭಾಗವಹಿಸಿದ್ದರು.

ಮಲೇಬೆನ್ನೂರು ಪುರಸಭೆ ಸದಸ್ಯ ಬಿ.ವೀರಯ್ಯ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ವಿ.ಸಿದ್ದಯ್ಯ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಲೈಟಿಂಗ್ ಕರಿಬಸಯ್ಯ ವಂದಿಸಿದರು.

error: Content is protected !!